ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಂದೂರು: ಅಂತರರಾಷ್ಟ್ರೀಯ ಉದ್ಯೋಗ ಮೇಳ 31ಕ್ಕೆ

Published 28 ಆಗಸ್ಟ್ 2024, 6:11 IST
Last Updated 28 ಆಗಸ್ಟ್ 2024, 6:11 IST
ಅಕ್ಷರ ಗಾತ್ರ

ಬೈಂದೂರು: ಇಲ್ಲಿನ ಜೆ.ಎನ್.ಆರ್. ಆಡಿಟೋರಿಯಂನಲ್ಲಿ ಆ. 31ರಂದು ಸಮೃದ್ಧ ಬೈಂದೂರು ವತಿಯಿಂದ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಅಂತರರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ‘ಅಂತರರಾಷ್ಟ್ರೀಯ ಉದ್ಯೋಗ ಮೇಳ’ ನಡೆಯಲಿದೆ.

ಮೇಳದಲ್ಲಿ ಜಪಾನ್, ಮಲೇಷಿಯಾ, ಜರ್ಮನ್, ಕ್ರೋವೆಷಿಯಾ, ಗಲ್ಫ್‌ ರಾಷ್ಟ್ರಗಳ ವಿವಿಧ ಕಂಪನಿಗಳು ಭಾಗವಹಿಸಲಿದ್ದು, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಕೋರ್ಸ್, ತಾಂತ್ರಿಕೇತರ ಕೋರ್ಸ್ ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಉದ್ಯೋಗಗಳು ಲಭ್ಯವಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯ ಮೂಲಕವೇ ಮೇಳ ನಡೆಯುವುದರಿಂದ ಸಂಪೂರ್ಣ ನಿರ್ವಹಣೆಯನ್ನು ಎನ್‌ಎಸ್‌ಡಿಸಿಐ ಮಾಡಲಿದೆ.

ನೋಂದಾಯಿಸಿಕೊಳ್ಳಲು ಆ. 28 ಕೊನೆ ದಿನ. https://forms.office.com/r/T73nGPz24h ಮೂಲಕ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 79013 02000, 97784 17835, 72041 66276 ಸಂಪರ್ಕಿಸಬಹುದು ಎಂದು ಸಮೃದ್ಧ ಬೈಂದೂರು ಟ್ರಸ್ಟ್‌‌ನ ಪ್ರಕಟಣೆ ತಿಳಿಸಿದೆ.

ಉದ್ಯೋಗಾವಕಾಶ: ನರ್ಸಿಂಗ್ ಕೇರ್, ಬಿಲ್ಡಿಂಗ್ ಕ್ಲೀನಿಂಗ್ ಮ್ಯಾನೇಜ್ಮೆಂಟ್, ಕೈಗಾರಿಕಾ ಉತ್ಪನ್ನ ಸಿದ್ಧಪಡಿಸುವುದು, ನಿರ್ಮಾಣ ವಲಯ, ಏವಿಯೇಷನ್, ಕೃಷಿ, ಮೀನುಗಾರಿಕೆ ಮತ್ತು ಸಂಬಂಧಿತ ಉದ್ಯೋಗ, ಆಹಾರ ಪೂರೈಕೆ, ರೈಲ್ವೆ ಟ್ರಾನ್ಸ್‌ಪೋರ್ಟ್‌, ಫಾರೆಸ್ಟ್ರೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT