ಬೈಂದೂರು: ಯುದ್ಧವನ್ನು ಧರ್ಮಾಧಾರಿತವಾಗಿ ಬೆಂಬಲಿಸುವುದು ಅಪಾಯಕಾರಿ. ಎಲ್ಲ ರೀತಿಯ ಯುದ್ಧಗಳು ಎಲ್ಲ ಧರ್ಮದ ಜನರ ಬದುಕನ್ನು ಹಾಳು ಮಾಡುತ್ತವೆ. ಯುದ್ಧದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನರು ತತ್ತರಿಸುತ್ತಿದ್ದಾರೆ. ಮತ, ಧರ್ಮ ಮರೆತು ಯುದ್ಧವನ್ನು ವಿರೋಧಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.

ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆದ ಬೈಂದೂರು ಕಟ್ಟಡ ನಿರ್ಮಾಣ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಸೇವಾ ಕೇಂದ್ರ ಹಾಗೂ ಉಚಿತ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕಲ್ಯಾಣ ಮಂಡಳಿಯ ಹಣ ಖಾಸಗಿಯವರ ಪಾಲಾಗುತ್ತಿದೆ. ಕಾರ್ಮಿಕರಲ್ಲಿ ಹಣ ಭ್ರಷ್ಟಾಚಾರ ನಡೆಸಲು ಅನುಕೂಲವಾಗಿದೆ ಎಂದು ಆರೋಪಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದರೆ ಕಟ್ಟಡ ಕಾರ್ಮಿಕರು ಹಾಗೂ ಸಂಘಟಿತ ಕಾರ್ಮಿಕರು ಬಹುತೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ಕೌಶಲ ತರಬೇತಿ ಹೆಸರಿನಲ್ಲಿ ಕಲ್ಯಾಣ ಮಂಡಳಿಯ ₹600 ಕೋಟಿ ಹಾಗೂ ಶ್ರಮಿಕ ಶಾಲೆಗಳ ಹೆಸರಿನಲ್ಲಿ ₹3,000 ಕೋಟಿ ಹಾಗೂ ಕಿಟ್ಗಳ ಖರೀದಿ ಹಾಗೂ ತಾತ್ಕಾಲಿಕ ವಸತಿ ಹೆಸರಿನಲ್ಲಿ ₹200 ಕೋಟಿ ಹಣವನ್ನು ಲೂಟಿ ಹೊಡೆಯಲು ಬಜೆಟ್ನಲ್ಲಿ ಘೋಷಿಸಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಎರಡು ವರ್ಷಗಳಿಂದ ಖಾತೆಗೆ ಜಮೆ ಮಾಡದೆ ವಂಚಿಸಿದೆ. ಇದು ನೈಜ ಕಾರ್ಮಿಕರಿಗೆ ಮಾಡಿದ ಮೋಸ. ಇದರ ವಿರುದ್ಧ ಅಧಿವೇಶನಕ್ಕೂ ಮುಂಚಿತವಾಗಿ ರಾಜ್ಯದ ಎಲ್ಲಾ ಶಾಸಕರಿಗೂ ಮನವಿ ನೀಡಲು ಕಟ್ಟಡ ಕಾರ್ಮಿಕರ ರಾಜ್ಯ ಸಮಿತಿ ಕರೆ ನೀಡಿದೆ. ಏಪ್ರಿಲ್ 20ರಂದು ಮಂಡಳಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು.

ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘಟನೆಯ ಶೋಭಾ ಕೆರೆಮನೆ, ಸಂಘದ ಮುಖಂಡರಾದ ಶ್ರೀಧರ ಉಪ್ಪುಂದ, ಮಂಜು ಪೂಜಾರಿ, ಅಮ್ಮಯ್ಯ ಪೂಜಾರಿ, ನಾಗರತ್ನಾ ನಾಡ, ಪದ್ಮಾವತಿ, ವಿಜಯ ಬಿ, ರಾಮ ಕಂಬದಕೋಣೆ, ಉದಯ ಗಾಣಿಗ, ರೋನಿ ವಿನೋದ್ ನಜ್ರತ್, ಅಣ್ಣಪ್ಪ ದೇವಾಡಿಗ, ಶಾಂತಾ ಪೂಜಾರಿ, ಲಕ್ಷ್ಮಣ ದೇವಾಡಿಗ ಇದ್ದರು.

ಮಹಾಸಭೆಯಲ್ಲಿ ಹೊಸ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ತೊಂಡೆಮಕ್ಕಿ, ಕೋಶಾಧಿಕಾರಿಯಾಗಿ ಗೋಪಾಲ ಕೃಷ್ಣ ದೇವಾಡಿಗ ಸೇರಿದಂತೆ 19 ಮಂದಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆಯಾದರು.

ನಾಗರತ್ನಾ ಪಡುವರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಗಣೇಶ್ ತೊಂಡೆಮಕ್ಕಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.