ಬಾರ್ಕೂರು (ಬ್ರಹ್ಮಾವರ): ಕ್ರೀಡೆಯಿಂದ ಮಾನಸಿಕ, ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಕ್ರೀಡಾಪಟುಗಳಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ಸಿಗುತ್ತಿರುವುದು ಶ್ಲಾಘನೀಯ ಎಂದು ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಹೇಳಿದರು.

ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು ಚೌಳಿಕೆರೆ ಮೈದಾನದಲ್ಲಿ ಬಾರ್ಕೂರಿನ ಸ್ವಸ್ತಿಕ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಆರ್.ಕೆ. ಸ್ಪೋರ್ಟ್ ಕ್ಲಬ್, ಎನ್.ಜೆ.ಸಿ ಫ್ರೆಂಡ್ಸ್, ವೀರ ಮಾರುತಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಬಾರ್ಕೂರು ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಸಹಯೋಗದಲ್ಲಿ 3 ದಿನ ಬಾರ್ಕೂರು ಮಸ್ಕಿಬೈಲು ಕೃಷ್ಣ ಮೇಸ್ತ್ರ ಅವರ ಸ್ಮರಣಾರ್ಥ ನಡೆದ ಬಿ.ಎಂ.ಕೆ ಟ್ರೋಫಿ 90 ಗಜಗಳ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಉದ್ಯಮಿ ಸಂತೋಷ ಕುಮಾರ್ ಶೆಟ್ಟಿ, ಉಡುಪಿ ಆರ್ಪಿಐ ಉಪಾಧ್ಯಕ್ಷ ಗಣೇಶ ಸಾಲ್ಯಾನ್, ಹುಬ್ಬಳ್ಳಿಯ ಉದ್ಯಮಿ ಶ್ರೀನಿವಾಸ ಕಕ್ಕುಂಜೆ, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಎನ್. ಪೂಜಾರಿ, ನಡೂರು ಅಸೋಸಿಯೇಟ್ಸ್ನ ಸಂದೀಪ ಬಿ, ಚಿಕ್ಕಮಗಳೂರಿನ ನಾಸಿರಾ, ಮಾಸ್ತಿನಗರದ ದಿಲೀಪ ಕುಂದರ್, ಬಾರ್ಕೂರು ಸ್ವಸ್ತಿಕ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಸುರೇಶ ಸುಭಾನು, ಟೂರ್ನಿ ಸಂಘಟಕ ಎಡ್ವರ್ಡ್ ಪ್ರವೀಣ್ ಡಿಸೋಜ, ಉಪ ವಲಯ ಅರಣ್ಯಾಧಿಕಾರಿ ರಿಚರ್ಡ್ ನವೀನ್ ಡಿಸೋಜ ಭಾಗವಹಿಸಿದ್ದರು.

ರಕ್ಷಿತ್ ಪೂಜಾರಿ ಸ್ವಾಗತಿಸಿದರು. ನಿಖಿಲ್ ವಂದಿಸಿದರು. ಅಶೋಕ ಪೂಜಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.