ಕಾರ್ಕಳ: ತಾಲ್ಲೂಕಿನ ಬೆಳ್ಮಣ್ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 14ರಿಂದ 21ರ ತನಕ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಕೆ ವಿಘ್ನೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

14ರಂದು ಬೆಳಿಗ್ಗೆ ಧ್ವಜಾರೋಹಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ನಂತರ ಅನ್ನಸಂತರ್ಪಣೆ, ರಾತ್ರಿ 7ರಿಂದ ಊರ ಆಯನ, ಉತ್ಸವ ಬಲಿ ನಡೆಯಲಿದೆ. ರಾತ್ರಿ ಗಂಟೆ 8.30ರಿಂದ ಹೊಸಮಾರು ವಠಾರದ ರಂಗಮಂದಿರದಲ್ಲಿ ನಂದಳಿಕೆ ಅಬ್ಬನಡ್ಕ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಪ್ರಾಯೋಜಕತ್ವದಲ್ಲಿ ಕಿನ್ನಿಗೋಳಿ ವಿಜಯ ಕಲಾವಿದರ ತಂಡದ ನಾಟಕ ಪ್ರದರ್ಶನ ನಡೆಯಲಿದೆ.

15ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ ತಪ್ಪಂಗಾಯಿ ಬಲಿ, ರಾತ್ರಿ 8.30ಕ್ಕೆ ಹೊಸಮಾರು ರಂಗಮಂದಿರದಲ್ಲಿ ಹೊಸಮಾರು ಹಳೆವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ಉಡುಪಿ ಅಭಿನಯ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ಶಾಂಭವಿ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.

16ರಂದು ಮಧ್ಯಾಹ್ನ12ಕ್ಕೆ ಮಹಾಪೂಜೆ, ಒಂದರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 7ರಿಂದ ಉತ್ಸವ ಬಲಿ, ಮೂಡುಸವಾರಿ ಉತ್ಸವ, ಅಬ್ಬನಡ್ಕದಲ್ಲಿ ಕಟ್ಟೆಪೂಜೆ ನಡೆಯಲಿದೆ. ರಾತ್ರಿ 7ರಿಂದ ಹೊಸಮಾರು ರಂಗಮಂದಿರದಲ್ಲಿ ಬೆಳ್ಮಣ್ಣು ಪೈ ಹೋಮ್ ಪ್ರೊಡಕ್ಟ್ ಮಾಲಕ ಸದಾಶಿವ ಪೈ ಅವರ ಪ್ರಾಯೋಜಕತ್ವದಲ್ಲಿ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತ ಗಾನ ಸಂಭ್ರಮ ಇದೆ.

17ರಂದು ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಒಂದರಿಂದ ಅನ್ನಸಂತರ್ಪಣೆ, ರಾತ್ರಿ ಸಿರಿ ಭೂತ ಬಲಿ, ಕವಾಟ ಬಂಧನ, ಶಯನ ಪೂಜೆ ನಡೆಯಲಿದೆ. ರಾತ್ರಿ 7ರಿಂದ ಹೊಸಮಾರು ರಂಗಮಂದಿರದಲ್ಲಿ ಬೆಳ್ಮಣ್ಣು ಅಕ್ಷಯ ಜ್ಯುವೆಲ್ಲರಿ ಮಾಲಕ ಆದರ್ಶ್ ಆಚಾರ್ಯ ಅವರ ಪ್ರಾಯೋಜಕತ್ವದಲ್ಲಿ ಮಂಗಳೂರು ಉರ್ವ ಚಿಲಿಂಬಿ ಸಾಯಿಶಕ್ತಿ ಕಲಾ ಬಳಗದವರಿಂದ ಜೋಡು ಜೀಟಿಗೆ ತುಳು ಜನಪದ ನಾಟಕವಿದೆ. 18ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಆರಾಟ ಮಹೋತ್ಸವ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಒಂದರಿಂದ ಅನ್ನಸಂತರ್ಪಣೆ, ಸಂಜೆ 4ರಿಂದ ಓಕುಳಿ, ಕಟ್ಟೆಪೂಜೆ ಆರಂಭ, ರಾತ್ರಿ ಅವಭೃಥೋತ್ಸವ ನಡೆಯಲಿದೆ.

19ರಂದು ಧ್ವಜಾವರೋಹಣ, 20ರಂದು ಬೆಳಿಗ್ಗೆ ಶತರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಒಂದರಿಂದ ಅನ್ನಸಂತರ್ಪಣೆ, ರಾತ್ರಿ 7ರಿಂದ ದೇವರ ಬಲಿ ಆರಂಭ. ನಂತರ ಮಹಾರಂಗ ಪೂಜಾ ಮಹೋತ್ಸವ ನಡೆಯಲಿದೆ. 21ರಂದು ರಾತ್ರಿ 7ರಿಂದ ಪಂಚ ದೈವಗಳ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.