36 ಶಾಲೆಗಳ 3,242 ಮಕ್ಕಳಿಗೆ ಪ್ರಯೋಜನ

7
ಅದಾನಿ ಯುಪಿಸಿಎಲ್: ಶಿಕ್ಷಣ ಪರಿಕರಗಳ ವಿತರಣೆ

36 ಶಾಲೆಗಳ 3,242 ಮಕ್ಕಳಿಗೆ ಪ್ರಯೋಜನ

Published:
Updated:
ಅದಾನಿ ಫೌಂಡೇಶನ್ ತನ್ನ ಸಿಎಸ್ಆರ್ ನಿಧಿಯಿಂದ ಗುರುವಾರ ಸ್ಥಾವರದ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. (ಪಡುಬಿದ್ರಿ ಚಿತ್ರ)

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಕಂಪನಿಯು ತನ್ನ ಅಂಗ ಸಂಸ್ಥೆಯಾದ ಅದಾನಿ ಫೌಂಡೇಶನ್ ವತಿಯಿಂದ ಗುರುವಾರ ತನ್ನ ಸಿಎಸ್ಆರ್ ನಿಧಿಯಿಂದ ಸ್ಥಾವರದ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮೊದಲನೇ ಹಂತವಾಗಿ 36 ಶಾಲೆಗಳ ಒಟ್ಟು 3,242 ಮಕ್ಕಳಿಗೆ ಕಂಪನಿಯ ಕಾರ್ಯನಿರ್ವಹಕ ನಿರ್ದೇಶಕ ಕಿಶೋರ್ ಆಳ್ವ ಶಾಲೆಗೆ ತೆರಳಿ ಶೈಕ್ಷಣಿಕ ಪರಿಕರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘ಅದಾನಿ ಫೌಂಡೇಶಸ್‌ನ ಸಿ.ಎಸ್.ಆರ್ ಚಟುವಟಿಕೆಗಳಲ್ಲಿ ಶಿಕ್ಷಣ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದೆ. ‌ಶಿಕ್ಷಣ ಪರಿಕರ, ವಿದ್ಯಾರ್ಥಿವೇತನ ವಿತರಣೆ, ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಅನುದಾನ, ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ಲ್ಯಾಪ್‌ಟಾಪ್‌ ವಿತರಣೆ, ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ, ಶೌಚಾಲಯ ನಿರ್ಮಾಣ ಇವು ಒಳಗೊಂಡಿವೆ’ ಎಂದರು.

ಯುಪಿಸಿಎಲ್ ಅದಾನಿ ಸಮೂಹಕ್ಕೆ ಸೇರಿ 3 ವರ್ಷಗಳಾಗಿದ್ದು, ಸತತವಾಗಿ 3 ವರ್ಷಗಳಿಂದ ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಪರಿಕರಗಳನ್ನು ಒದಗಿಸುತ್ತಿದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸುಮಾರು ₹ 70 ಲಕ್ಷದಷ್ಟು ಅನುದಾನವನ್ನು ಈ ಕಾರ್ಯಕ್ರಮಕ್ಕೆ ಫೌಂಡೇಶನ್ ಮೀಸಲಿಟ್ಟಿದೆ ಎಂದು ತಿಳಿಸಿದರು.

ಯಾವ ಶಾಲೆಗಳು: ಮುದರಂಗಡಿಯ ಸಂತ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ, ಎಲ್ಲೂರಿನ ಎಸ್.ವಿ.ಸಿ.ಎಸ್ ಹಿರಿಯ ಪ್ರಾಥಮಿಕ ಶಾಲೆ, ಕೆಮೆಂಡಲುವಿನ ಹಿರಿಯ ಪ್ರಾಥಮಿಕ ಶಾಲೆ, ಪಣಿಯೂರಿನ ಶ್ರೀ ದುರ್ಗಾ ದೇವಿ ಹಿರಿಯ ಪ್ರಾಥಮಿಕ ಶಾಲೆ, ಬೆಳಪು ಹಿರಿಯ ಪ್ರಾಥಮಿಕ ಶಾಲೆ, ಸಂಯುಕ್ತ ಪ್ರೌಢಶಾಲೆ, ಕುತ್ಯಾರು ಪ್ರಾಥಮಿಕ ಶಾಲೆ, ಪಡು ಕಳತ್ತೂರು ಪ್ರೌಢ ಶಾಲೆ, ಅದಮಾರಿನ ಪೂರ್ಣ ಪ್ರಜ್ಞ ಪ್ರೌಢ ಶಾಲೆ, ಹಿಂದು ಹಿರಿಯ ಪ್ರಾಥಮಿಕ ಶಾಲೆ, ನಂದಿಕೂರು ಪ್ರಾಥಮಿಕ ಶಾಲೆ, ಕಂಚಿನಡ್ಕ ಹಿರಿಯ ಪ್ರಾಥಮಿಕ ಶಾಲೆ, ಪಾದೆಬೆಟ್ಟು ಹಿರಿಯ ಪ್ರಾಥಮಿಕ ಶಾಲೆ, ಪಡುಬಿದ್ರಿಯ ಎಸ್.ಬಿ.ವಿ.ಪಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢ ಶಾಲೆ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆ, ಎರ್ಮಾಳು ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತೆಂಕ ಸಂಯುಕ್ತ ಪ್ರೌಢಶಾಲೆ, ಪ್ರೌಢ ಶಾಲೆ, ಉಚ್ಚಿಲ ಬಡಾ ಪ್ರೌಢಶಾಲೆ, ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ, ಮೂಳೂರು ಎಸ್.ಐ ಸಂಯುಕ್ತ ಪ್ರೌಢಶಾಲೆ, ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಪು ಪಡು ಪ್ರಾಥಮಿಕ ಶಾಲೆ, ಕಾಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೊಲಿಪು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕೈಪುಂಜಲು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿತರಿಸಲಾಯಿತು.

ನೋಟ್ ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ಬ್ಯಾಗ್‌ಗಳ ಜೊತೆಗೆ ಕೊಡೆಗಳನ್ನು ನೀಡಲಾಯಿತು. ಯುಪಿಸಿಎಲ್ ಸಂಸ್ಥೆಯ ಅಸೋಸಿಯೇಟ್ ಜನರಲ್ ಮ್ಯಾನೆಜರ್ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಸಂಸ್ಥೆಯ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !