ಭೀಮಕಟ್ಟೆ ಮಠ ನವೀಕರಣಕ್ಕೆ ಶಿಲಾನ್ಯಾಸ

7

ಭೀಮಕಟ್ಟೆ ಮಠ ನವೀಕರಣಕ್ಕೆ ಶಿಲಾನ್ಯಾಸ

Published:
Updated:
Deccan Herald

ಉಡುಪಿ: ಶ್ರೀ ಕೃಷ್ಣಮಠ ರಥಬೀದಿಯಲ್ಲಿರುವ ಭೀಮನಕಟ್ಟೆ ಮಠದ ನವೀಕರಣಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಹೆರ್ಗ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ ನವಗ್ರಹ ಹೋಮ ಸೇರಿದಂತೆ ಇತರೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಬೆಳಗ್ಗೆ 11:30ರ ಮುಹೂರ್ತದಲ್ಲಿ ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಮಠಧೀಶ ಈ ಶಪ್ರಿಯ ತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠ ರಘುವರೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನಗೊಂಡಿತು.

ಅದಮಾರು ಮಠ ಮತ್ತು ಸೋಸಲೆ ವ್ಯಾಸರಾಜ ಮಠದ ಮಧ್ಯಭಾಗದಲ್ಲಿ ಭೀಮನಕಟ್ಟೆ ಮಠಕ್ಕೆ ಸೇರಿದ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು.ಇಲ್ಲಿನ 16 ಸೆಂಟ್ಸ್ ಸ್ಥಳದಲ್ಲಿ 300 ವರ್ಷ ಹಳೆಯ ಕಟ್ಟಡ ಕೆಡವಿ 22 ಕೋಟಿ ವೆಚ್ಚದಲ್ಲಿ ನೂತನ ಮಠ ನಿರ್ಮಿಸಲಾಗುತ್ತಿದೆ. ಇಲ್ಲಿ ರಾಮ ದೇವರನ್ನು ಪ್ರತಿಷ್ಠಾಪಿಸಿ, ವೈದಿಕ ಕರ್ಮ, ನಿತ್ಯ ಪೂಜೆ, ಪಾಠ, ಪ್ರವಚನಕ್ಕೆ ವ್ಯವಸ್ಥೆ ಕಲ್ಪಿಸುವುದು ತೀರ್ಥಹಳ್ಳಿ ಭೀಮನಕಟ್ಟೆ ಮಠದ ಪೀಠಾಧಿಪತಿ ರಘುವರೇಂದ್ರ ತೀರ್ಥ ಸ್ವಾಮೀಜಿ ಉದ್ದೇಶವಾಗಿದೆ.

ಶಾಸಕ ರಘುಪತಿ ಭಟ್, ಪರ್ಯಾಯ ಪಲಿಮಾರು ಮಠದ ಶ್ರೀಶ ಕಡೆಕಾರು, ಭೀಮನಕಟ್ಟೆ ಮಠದ ಹರೀಶ್ ಭಟ್, ಸಾಗರ್ ಭಟ್, ವೆಂಕಟೇಶ್, ಜನಾರ್ಧನ್, ಗುರುರಾಜಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !