ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ರ ಸಂಭ್ರಮದಲ್ಲಿ ಬ್ರಹ್ಮಾವರ ರೋಟರಿ

Last Updated 2 ಜುಲೈ 2022, 4:21 IST
ಅಕ್ಷರ ಗಾತ್ರ

ಬ್ರಹ್ಮಾವರ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬ್ರಹ್ಮಾವರ ರೋಟರಿ ಕಳೆದ 50 ವರ್ಷಗಳಲ್ಲಿ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ. ಪ್ರತಿ ತಿಂಗಳ ಮಾನಸಿಕ ಉಚಿತ ಚಿಕಿತ್ಸಾ ಶಿಬಿರ, ಈ ವರ್ಷದ ಡಯಾಲಿಸಿಸ್ ಕೇಂದ್ರದ ಕೊಡುಗೆ‌ ಹಾಗೂ ಮುಂದೆ ಆರಂಭಿಸಲು ಉದ್ದೇಶಿಸಿರುವ ಬ್ಲಡ್ ಬ್ಯಾಂಕ್ ಯೋಜನೆ ಹೀಗೆ ನಿರಂತರವಾಗಿ ಮೂಡಿಬರುತ್ತಿರುವ ಸಮಾಜಸೇವೆ ಮುಂದುವರಿಯಲಿ ಎಂದು ರೋಟರಿಯ ಮಾಜಿ ಜಿಲ್ಲಾ ಗವರ್ನರ್‌ ಅಭಿನಂದನ್‌ ಶೆಟ್ಟಿ ಹೇಳಿದರು.

ತಾಲ್ಲೂಕಿನ ಮದರ್‌ ಪ್ಯಾಲೇಸ್‌ ಆಡಿಟೋರಿಯಂನಲ್ಲಿ ನಡೆದ ಬ್ರಹ್ಮಾವರ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದೇ ಸಂದರ್ಭ 2022-23ನೇ ಸಾಲಿನ ನೂತನ ಅಧ್ಯಕ್ಷ ದಿನೇಶ್‌ ಕುಮಾರ್, ಕಾರ್ಯದರ್ಶಿಯಾಗಿ ಅಲ್ವಿನ್‌ ಅಂದ್ರಾದೆ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಸಹಾಯಕ ಗವರ್ನರ್ ಕೆ. ಪದ್ಮನಾಭ ಕಾಂಚನ್, ನಿಯೋಜಿತ ಸಹಾಯಕ ಗವರ್ನರ್‌ ಆನಂದ ಶೆಟ್ಟಿ, ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ, ನಿಯೋಜಿತ ವಲಯ ಸೇನಾನಿ ಎಸ್.ಕೆ. ಪ್ರಾಣೇಶ್ ಇದ್ದರು.

ಸಮಾರಂಭದಲ್ಲಿ ಬ್ರಹ್ಮಾವರ ಆಸುಪಾಸಿನ 17 ಶಾಲೆಗಳ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.

ರೋಟರಿ ಫೌಂಡೇಶನ್‌ಗೆ ₹ 50 ಸಾವಿರಕ್ಕಿಂತಲೂ ಹೆಚ್ಚಿಗೆ ದೇಣಿಗೆ ನೀಡಿದ ಮತ್ತು ಮಾನಸಿಕ ಆರೋಗ್ಯ ಶಿಬಿರದ ಪ್ರಾಯೋಜಕರನ್ನು ಗೌರವಿಸಲಾಯಿತು.

ನಿರ್ಗಮನ ಅಧ್ಯಕ್ಷ ಹರೀಶ್‌ ಕುಂದರ್‌ ಸ್ವಾಗತಿಸಿದರು‌, ನಿರ್ಗಮನ ಕಾರ್ಯದರ್ಶಿ ಸತೀಶ್ ಶೆಟ್ಟಿ ವರದಿ ವಾಚಿಸಿದರು. ಶರತ್ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಮಹಾಂತ್ ಶೆಟ್ಟಿ ಪರಿಚಯಿಸಿದರು. ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT