ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಸೆಳೆಯಲು ಬ್ಲಾಗರ್ಸ್ ಮೀಟ್

ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆ
Last Updated 27 ಸೆಪ್ಟೆಂಬರ್ 2022, 14:42 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು, ಮನಮೋಹಕ ಬೀಚ್‌ಗಳು, ಐತಿಹಾಸಿಕ ಧಾರ್ಮಿಕ ಸ್ಥಳಗಳಿಗೆ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆಯು ವಿಶಿಷ್ಟ ಕಾರ್ಯಕ್ರಮ ರೂಪಿಸಿದ್ದು, ಬ್ಲಾಗರ್ಸ್‌ಗಳ ಮೂಲಕ ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ದಿನದಂದೇ ಬ್ಲಾಗರ್ಸ್‌ ಮೀಟ್‌ ಆಯೋಜಿಸಿದೆ ಮುಂದಡಿ ಇಟ್ಟಿದೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಈಗಾಗಲೇ ಭೇಟಿ ನೀಡುತ್ತಿದ್ದು, ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಬ್ಲಾಗರ್ಸ್‌ ಮೀಟ್‌ ಸಹಕಾರಿಯಾಗಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯ ಜತೆಗೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ.

ಬ್ಲಾಗರ್ಸ್ ಮೀಟ್ ಯಾಕೆ:

ಪ್ರಸ್ತುತ ಸಾಮಾಜಿಕ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕ್ಷಣ ಮಾತ್ರದಲ್ಲಿ ಕೋಟ್ಯಂತರ ಜನರನ್ನು ತಲುಪಬಹುದು. ಸಂವಹನ ಹಾಗೂ ಪ್ರಚಾರವನ್ನೂಮಾಡಬಹುದು. ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮವನ್ನೇ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರಸಿದ್ದ ಪ್ರವಾಸಿ ಬ್ಲಾಗರ್‌ಗಳನ್ನು ಜಿಲ್ಲೆಗೆ ಆಹ್ವಾನಿಸಿ ಅವರಿಗೆಲ್ಲ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಗಳನ್ನು ಮಾಡಿಕೊಡಲಾಗುತ್ತಿದೆ. ಬ್ಲಾಗರ್ ಮೀಟ್ ಕಾರ್ಯಕ್ರಮಕ್ಕೆ ಗೋವಾದಿಂದ ನಾಲ್ವರು, ಹೈದರಾಬಾದ್‌ನಿಂದ ಒಬ್ಬರು, ಜಾರ್ಖಂಡ್‌ನಿಂದ ಒಬ್ಬರು, ಬೆಂಗಳೂರಿನಿಂದ, ಮಂಗಳೂರಿನಿಂದ ತಲಾ ಮೂವರು, ಮಥುರಾದಿಂದ ಒಬ್ಬರು ಬ್ಲಾಗರ್ ಉಡುಪಿ ಜಿಲ್ಲೆಗೆ ಬಂದಿದ್ದಾರೆ.

ಎಲ್ಲ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ವಿಸ್ತೃತ ಮಾಹಿತಿಯೊಂದಿಗೆ ವಿಶ್ವದಾದ್ಯಂತ ಪ್ರಚಾರ ಮಾಡಲಿದ್ದಾರೆ. 2 ದಿನಗಳ ಕಾಳ ಜಿಲ್ಲೆಯ ಎಲ್ಲ ಪ್ರವಾಸಿ ಕೇಂದ್ರಗಳಿಗೆ ಬ್ಲಾಗರ್‌ಗಳನ್ನು ಕರೆದೊಯ್ದು ಸ್ಥಳಗಳ ವಿಶೇಷತೆ, ಸೌಲಭ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಲಿದೆ.

ಬಳಿಕ ಬ್ಲಾಗರ್‌ಗಳು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ವಿಶೇಷ ಲೇಖನ, ಪೂರಕ ವಿಡಿಯೋ, ಫೋಟೊಗಳನ್ನು ಪ್ರಕಟಿಸಲಿದ್ದು ದೇಶ ಹಾಗೂ ವಿದೇಶಗಳ ಕೋಟ್ಯಂತರ ಜನರನ್ನು ತಲುಪಲು ಸಾದ್ಯವಾಗಲಿದೆ. ಎಲ್ಲ ಬ್ಲಾಗರ್‌ಗಳು 8 ಲಕ್ಷಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವುದರಿಂದ ಪ್ರವಾಸಿಗರನ್ನು ಸುಲಭವಾಗಿ ತಲುಪಬಹುದು ಎಂಬುದು ಪ್ರವಾಸೋದ್ಯಮ ಇಲಾಖೆಯ ಲೆಕ್ಕಾಚಾರ. ಬ್ಲಾಗರ್‌ಗಳಲ್ಲಿ ಆರ್.ಜೆ ಗಳು ಮತ್ತು ಯುಟ್ಯೂಬ್‌ರಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT