ಪಡುಬಿದ್ರಿ: ‘ಬಾಹ್ಯ ಸೌಂದರ್ಯವಂತರಾಗಿದ್ದರೆ ಸಾಲದು, ಮನಸ್ಸು ಸುಂದರವಾಗಿರಬೇಕು. ಜನ್ಮಕೊಟ್ಟ ತಂದೆ ತಾಯಿಯನ್ನು ಉತ್ತಮವಾಗಿ ನೋಡುವುದೇ ಮನಸ್ಸಿನ ಸೌಂದರ್ಯ’ ಎಂದು ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪುರಾಣ ಪ್ರಸಿದ್ಧ ಬೊಲ್ಲೆಟ್ಟು ಆದಿ ಆಲಡೆ ಜೀಣೋದ್ಧಾರಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಹಬ್ಬಗಳ ಆಚರಣೆಗೆ ತೊಂದರೆಗಳಾಗದಂತೆ ದೇವರು ನೋಡಿಕೊಳ್ಳತ್ತಾನೆ. ಇದೇ ಭಾರತದ ನೆಲದ ವೈಶಿಷ್ಟ್ಯವಾಗಿದೆ. ತಾಯಿಯಂತೆ ಪೊರೆಯುವ ದೇವರಿಗೆ ಮಕ್ಕಳನ್ನು ಯಾವಾಗಲೂ ನೋಡುವ ಆಸೆ ಇದ್ದು, ಹಗೆತನವಿಲ್ಲದೆ ಪ್ರೀತಿಯಿಂದ ಕಷ್ಟ, ಕೀಟಲೆ ಕೊಟ್ಟು ತನ್ನೆಡೆಗೆ ಬರಮಾಡಿಕೊಳ್ಳುತ್ತಾನೆ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಎಸ್ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ವಕೀಲ ಪ್ರದೀಪ್ ಕುಮಾರ್, ಕುಮಾರ ಪಾತ್ರಿ ಅಶೋಕ್ ಮಾತನಾಡಿದರು. ತಂತ್ರಿಗಳಾದ ಸಜೆ ಹರೀಶ ಜೋಯಿಸ, ಪ್ರಧಾನ ಅರ್ಚಕ ಗಣೇಶ್ ಬಿ. ಭಟ್ ನೇತೃತ್ವದಲ್ಲಿ ಶಿಲಾನ್ಯಾಸ ಧಾರ್ಮಿಕ ವಿಧಿಗಳು ನೆರವೇರಿದವು.

ಕುತ್ಯಾರ್ ಅರಮನೆಯ ಜಿನೇಶ್ ಬಲ್ಲಾಳ್, ವೈ. ಪ್ರಪುಲ್ಲ ಶೆಟ್ಟಿ ಎಲ್ಲೂರುಗುತ್ತು, ಆಡಳಿತ ಸಮಿತಿ ಅಧ್ಯಕ್ಷ ಯುವರಾಜ ಶೆಟ್ಟಿ, ಜೀರ್ಣೊದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಎಂಜಿನಿಯರ್ ಭಗವಾನ್ದಾಸ್ ಶೆಟ್ಟಿಗಾರ್ ಪಾಲ್ಗೊಂಡಿದ್ದರು. ಬೊಲ್ಲೆಟ್ಟು ಆದಿ ಆಲಡೆ ಜೀಣೋದ್ಧಾರ ಸಮಿತಿ ಅಧ್ಯಕ್ಷ ವಸುಂಧರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉದಯ ಹೆಗ್ಡೆ ದಾರೋಡುಗುತ್ತು ವಂದಿಸಿದರು. ರಾಕೇಶ್ ಕುಂಜೂರು ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-28-1619261611

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.