ಬ್ರಹ್ಮಾವರ: ‘ಆನಂದ ಕುಂದರ್ ಸಮಾಜದ ದೊಡ್ಡ ಆಸ್ತಿ. ಅಂತಹ ವ್ಯಕ್ತಿಯ ಜನ್ಮದಿನ ಆಚರಿಸಿ ಆಶ್ರಮಗಳಿಗೆ ನೆರವು ನೀಡುವ ಕಾರ್ಯ ಪ್ರಶಂಸನೀಯ’ ಎಂದು ಚಿಂತಕಿ ಭಾರತಿ ವಿ. ಮಯ್ಯ ಶ್ಲಾಘಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಸಮಾಜ ಸೇವಕ, ದಾನಿ ಆನಂದ್ ಸಿ. ಕುಂದರ್ ಅವರ 78ನೇ ಜನ್ಮದಿನ ಆಚರಣೆ, ಆಶ್ರಮಕ್ಕೆ ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆನಂದ ಅವರು ಸಮಾಜದ ಕಣ್ಣೀರು ಒರೆಸುವ ಶಕ್ತಿಯಾಗಿ ಬೆಳೆದಿದ್ದಾರೆ. ಕೋಟ ಭಾಗದ ಎಷ್ಟೋ ಅಶಕ್ತರು, ಅನಾರೋಗ್ಯ ಪೀಡಿತರಿಗೆ ಆಶ್ರಯದಾತರಾಗಿ ಅವರು ಮಾಡುತ್ತಿರುವ ಕಾಯಕಕ್ಕೆ ಪರ್ಯಾಯವಿಲ್ಲ’ ಎಂದರು.

ಮಟಪಾಡಿಯ ವಿಜಯ ಬಾಲನಿಕೇತನ ಅನಾಥ ಬಾಲಾಶ್ರಮಕ್ಕೆ ದಿನಸಿ ಪರಿಕರ ವಿತರಿಸಲಾಯಿತು. ಆನಂದ ಸಿ. ಕುಂದರ್ ಅವರು ಆಶ್ರಮದ ಸಂಯೋಜಕ ಜಯರಾಮ್ ಅವರಿಗೆ ಅವುಗಳನ್ನು ಹಸ್ತಾಂತರಿಸಿದರು. ಪರಿಸರ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕೋಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಭಾಗವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಕಾರ್ಯಕ್ರಮ ಸಂಯೋಜಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-28-1443962607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.