ಬ್ರಹ್ಮಾವರ: ಬೆಂಗಳೂರಿನಲ್ಲಿ ಲೇಬರ್ ಕಾಂಟ್ರಾಕ್ಟ್ ಸಂಸ್ಥೆ ನಡೆಸುತ್ತಿದ್ದ ಉದ್ಯಮಿ ನರಸಿಂಹ ಎಚ್.ಎಸ್. (66) ಎಂಬುವವರು ಬ್ರಹ್ಮಾವರದ ಲಾಡ್ಜ್ವೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವ್ಯವಹಾರದಲ್ಲಿ ಉಂಟಾದ ಆರ್ಥಿಕ ನಷ್ಟದಿಂದಾಗಿ ಹಲವರಿಂದ ಸಾಲ ಪಡೆದಿದ್ದ ಅವರು, ಕಳೆದ ಎರಡು ತಿಂಗಳಿನಿಂದ ಬಡ್ಡಿ ಪಾವತಿಸಲು ಸಾಧ್ಯವಾಗದೆ ಸಾಲಗಾರರ ಕಿರುಕುಳದಿಂದ ಮನನೊಂದಿದ್ದರು ಎನ್ನಲಾಗಿದೆ. ಏ.12ರಂದು ಬ್ರಹ್ಮಾವರದ ಆಶ್ರಯ ಲಾಡ್ಜ್ಗೆ ಅವರು ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತರ ಪುತ್ರ ನೀಡಿದ ದೂರಿನಂತೆ ಕುಮಾರ್ ಕೆ.ಜೆ., ನರಸಿಂಹಣ್ಣ ಸೇರಿದಂತೆ ಐವರ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-28-1985920134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.