ಬ್ರಹ್ಮಾವರ: ‘ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊರಗ ಸಮುದಾಯದ ಮನೆಗಳಿಗೆ ಕಪಾಟು ಕೊಡುಗೆ ನೀಡಿರುವ ಸಮಾಜಸೇವಕ ಶ್ರೀಕಾಂತ್ ಶೆಣೈ ಅವರ ಕಾರ್ಯ ಶ್ಲಾಘನೀಯ’ ಎಂದು ಉದ್ಯಮಿ ಆನಂದ್ ಸಿ. ಕುಂದರ್ ಹೇಳಿದರು.

ಕೋಟತಟ್ಟು ಚಿಟ್ಟಿಬೆಟ್ಟು ಕೊರಗ ಕಾಲೊನಿಯ ಏಳು ಮನೆಗಳಿಗೆ ಸಮಾಜ ಸೇವಕ ಶ್ರೀಕಾಂತ್ ಶೆಣೈ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನೀಡಿದ ಕಪಾಟು ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಕಪಾಟು ನಿರ್ಮಿಸಿ ಒದಗಿಸಿದ ಪ್ರವೀಣ್ ಮಣೂರು ಅವರನ್ನು ಗೌರವಿಸಲಾಯಿತು. ಪಂಚವರ್ಣ ಸಂಘಟನೆ ಕೋಟ, ಶ್ರೀಟೀಮ್ ದೇವಿಕಿರಣ್ ಕೋಟ, ಜೈ ಕುಂದಾಪ್ರ ಸೇವಾ ಟ್ರಸ್ಟ್, ಟ್ರಾವೆಲಿಂಕ್ಸ್ ಫ್ರೆಂಡ್ಸ್ ಕೋಟ, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಸಂಘಟನೆ ಸಹಕರಿಸಿದ್ದವು.

ಟ್ರಾವೆಲಿಂಕ್ಸ್ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ಎಚ್. ಕುಂದರ್, ಕೋಟತಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಗೌರವಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಶ್ರೀದೇವಿ ಕಿರಣ್ ಕಾಂಪ್ಲೆಕ್ಸ್ ಗ್ರೂಪ್ ಮುಖ್ಯಸ್ಥ ಮಹೇಶ್ ಶೆಟ್ಟಿ, ಮಣೂರು ಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ ಅಶೋಕ್ ಶೆಟ್ಟಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ ಮುಖ್ಯಸ್ಥ ಪುಂಡಲೀಕ ಮೊಗವೀರ, ಕೋಟತಟ್ಟು ಪಂಚಾಯಿತಿ ಮಾಜಿ ಸದಸ್ಯೆ ವಿದ್ಯಾ ಸಾಲಿಯಾನ್, ನಿಸ್ವಾರ್ಥ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಗೋಪಿನಾಥ್ ಕಿಣಿ, ದಸಂಸ ಕೋಟ ಹೋಬಳಿಯ ಶ್ಯಾಮಸುಂದರ್ ತಕ್ಕಟ್ಟೆ, ಕುಮಾರ್ ಕೋಟ, ರಾಜು ಬೆಟ್ಟಿನಮನೆ, ದೇವಿಕಿರಣ್ ಕಾಂಪ್ಲೆಕ್ಸ್ ಪ್ರಮುಖರಾದ ಚೇತನ್ ಕುಮಾರ್, ಅವಿನಾಶ್ ಶೆಟ್ಟಿ, ಜ್ಞಾನೇಶ್ ಆಚಾರ್, ಪಂಚವರ್ಣದ ದಿನೇಶ್ ಆಚಾರ್, ನವೀನ್ ಶೆಟ್ಟಿ, ಕೊರಗ ಸಮುದಾಯದ ಲಕ್ಷ್ಮಿ, ರವಿ ಭಾಗವಹಿಸಿದ್ದರು.

ವಕೀಲ ಟಿ. ಮಂಜುನಾಥ್ ಗಿಳಿಯಾರು ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಶ್ರೀಕಾಂತ್ ಶೆಣೈ ಕೋಟ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-28-1106663775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.