ಬ್ರಹ್ಮಾವರ: ಇಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ರುಡ್ಸೆಟ್) ವತಿಯಿಂದ ಆಯೋಜಿಸಿದ್ದ 35 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರದ ಸಮಾರೋಪವು ಇತ್ತೀಚೆಗೆ ಜರುಗಿತು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಕಿಟ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದ ಚಾಂತಾರು ಪಿಡಿಒ ಮೀರಾ, ‘ಮಹಿಳೆಯರ ಅಚ್ಚುಮೆಚ್ಚಿನ ಕ್ಷೇತ್ರಗಳಲ್ಲಿ ಸೌಂದರ್ಯ ವೃದ್ಧಿಯ ಕೆಲಸವೂ ಒಂದಾಗಿದೆ. ತಮ್ಮನ್ನು ತಾವು ಅಂದವಾಗಿ ಕಾಣುವಂತೆ ಮಾಡಿಕೊಳ್ಳುವುದರ ಜತೆಗೆ ಇತರರ ಸೌಂದರ್ಯ ವೃದ್ಧಿಸುವಲ್ಲಿಯೂ ಸಮಾನ ಕಾಳಜಿ ವಹಿಸಬೇಕು. ಬಹಿರಂಗ ಶುದ್ಧಿಯ ಜತೆಗೆ ಅಂತರಂಗದ ಶುದ್ಧಿಯೂ ಇದ್ದಾಗ ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಮಹಿಳೆಯರು ಇಲ್ಲಿ ಪಡೆದ ಉತ್ತಮ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು, ಸ್ವಾಭಿಮಾನಿ ಉದ್ಯಮಿಗಳಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಎಂ. ಮಾತನಾಡಿ, ‘ಈ 35 ದಿನಗಳ ತರಬೇತಿಯು ನಿಜವಾದ ಅರ್ಥದಲ್ಲಿ ಯಶಸ್ವಿಯಾಗುವುದು ನೀವು ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಯಶಸ್ಸು ಸಾಧಿಸಿದಾಗ ಮಾತ್ರ. ಸಂಸ್ಥೆಗೆ ನೀವು ನೀಡುವ ಅತ್ಯಂತ ದೊಡ್ಡ ಕೊಡುಗೆ ಎಂದರೆ ಅದು ನಿಮ್ಮ ಯಶಸ್ಸು. ಭವಿಷ್ಯದಲ್ಲಿ ಉದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಸಲಹೆ ಅಥವಾ ಬ್ಯಾಂಕ್ ಸಾಲದ ಮಾರ್ಗದರ್ಶನ ಬೇಕಿದ್ದರೂ ಸಂಸ್ಥೆಯನ್ನು ಮುಕ್ತವಾಗಿ ಸಂಪರ್ಕಿಸಬಹುದು’ ಎಂದರು.

ತರಬೇತಿ ಅವಧಿಯಲ್ಲಿ ಪಾಲಿಸಿದ ಶಿಸ್ತನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ಹೇಳಿದರು.

ಉಪನ್ಯಾಸಕಿ ಹರಿಣಿ ಅಜಯ್ ರಾವ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಮಹಾದೇವಿ, ಅಕ್ಷತಾ ವಿ.ಎ., ಕಾಳಮ್ಮ ಹಾಗೂ ಸುಕನ್ಯಾ ಅವರು ತರಬೇತಿಯ ಅನುಭವ ಹಂಚಿಕೊಂಡರು.

ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕಿ ಚೈತ್ರ ಕೆ ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-28-1151369173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.