ಬ್ರಹ್ಮಾವರ: ಸರ್ಕಾರಿ ಕೆಲಸದ ಜತೆಗೆ ಸಮಾಜಮುಖಿ ಚಿಂತನೆಗಳೊಂದಿಗೆ ಸಾಮಾಜಿಕ ಮೌಲ್ಯಗಳೊಂದಿಗೆ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಆರೂರಿನಲ್ಲಿ ಈಚೆಗೆ ನಡೆದ ಸ್ಪಂದನ ಯುವ ವೃಂದದ ದಶಮಾನೋತ್ಸವ ಸಂಭ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಆರೂರು ಎಂಬ ಹೆಸರನ್ನು ಅನ್ವರ್ಥಕಗೊಳಿಸಿದ ಬಹುಮುಖ ಪ್ರತಿಭೆಯ ಸಮಾಜ ಸೇವಕರಾದ ಆರೂರು ತಿಮ್ಮಪ್ಪ ಶೆಟ್ಟಿ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾದುದು ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.

ನಿವೃತ್ತ ಮುಖ್ಯಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಅವರಿಗೆ ಸ್ಪಂದನ ದಶಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ಪಂದನ ಸಂಸ್ಥೆಯ ಅಧ್ಯಕ್ಷ ವೀರಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ರಾಜೀವ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ ಮೈರ್ಯಮಡಿ, ರಾಜೇಶ್ ಶೆಟ್ಟಿ ಬಿರ್ತಿ, ಆರೂರು ಶ್ರೀಧರ ಶೆಟ್ಟಿ, ಗುರುರಾಜ ರಾವ್, ಮುಖ್ಯ ಶಿಕ್ಷಕ ಮಂಜುನಾಥ ನಾಯಕ್, ಮಮತಾ ಶೆಟ್ಟಿ, ಕುರುಡುಂಜೆ ರತ್ನಾಕರ್ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಗೋಪಿ.ಕೆ.ನಾಯಕ್ ಹಾಜರಿದ್ದರು.

ಸ್ಪಂದನ ಸಂಸ್ಥೆಯ ಪೂರ್ವ ಅಧ್ಯಕ್ಷ ಚಂದ್ರ ನಾಯ್ಕ ವಂದಿಸಿದರು. ಶಿಕ್ಷಕ ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

ಮನರಂಜನೆ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜನ್ಸಾಲೆ ತಂಡದಿಂದ ಯಕ್ಷಗಾನ ನಾಟ್ಯ ವೈಭವ, ದೇವದಾಸ್ ಕಾಪಿಕಾಡ್ ತಂಡದಿಂದ ಎನ್ನನೇ ಕಥೆ ತುಳು ನಾಟಕ ಪ್ರದರ್ಶನ ನಡೆಯಿತು.

ನೀಲಮ್ಮ ಶೆಟ್ಟಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾರದಾ ಹೈಸ್ಕೂಲ್ನ ನಾಲ್ವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಲಾದ ₹ 20,000 ನಗದು ಪುರಸ್ಕಾರವನ್ನು ಟ್ರಸ್ಟ್ನ ಆರೂರು ನಾರಾಯಣ ಶೆಟ್ಟಿ ಮತ್ತು ಶರಣ್ಯ ನಾರಾಯಣ ಶೆಟ್ಟಿ ನೀಡಿ ಗೌರವಿಸಿದರು. ಸ್ಪಂದನ ವತಿಯಿಂದ ಗ್ರಾಮದ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿ ಚೈತನ್ಯ ಅವರನ್ನು ಗೌರವಿಸಲಾಯಿತು.

ಡಾ.ಶ್ರೀನಿವಾಸ ರಾವ್.ಎ.ಎನ್ (ವೈದ್ಯಕೀಯ),ಬಿಎಸ್ಎಫ್ ಯೋಧ ವಸಂತ ನಾಯ್ಕ್, ಸುಕೇಶ್ ಶೆಟ್ಟಿ (ಕಾನೂನು), ಕೆ.ನಾರಾಯಣ ಭಟ್, (ಶಿಕ್ಷಣ), ವಿದುಷಿ ದೀಕ್ಷಾ.ವಿ (ಭರತನಾಟ್ಯ), ವಾಸುದೇವ ಆಚಾರ್ (ಕರಕುಶಲ), ರುಕ್ಮಿಣಿ ಹಾಂಡಾ (ಗುಡಿ ಕೈಗಾರಿಕೆ), ಜಲಜಬಾಯಿ (ಕೃಷಿ), ಚೆಸ್ ಆಟಗಾರ್ತಿ ಪ್ರಗತಿ.ಕೆ.ನಾಯಕ್ ಪ್ರಣಿತ್ ಕೆ ನಾಯ್ಕ್, ಶ್ರೇಯಸ್ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-1796941622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.