ಬ್ರಹ್ಮಾವರ: ಕೋಡಿಕನ್ಯಾಣದ ಅಯೋಧ್ಯ ಫ್ರೆಂಡ್ಸ್ನ ಐದನೇ ವರ್ಷದ ಸಂಭ್ರಮದ ಅಂಗವಾಗಿ ನಡೆದ ’ಅಯೋಧ್ಯ ಉತ್ಸವ'ದ ಪ್ರಯುಕ್ತ ಕೋಡಿ ಕನ್ಯಾಣದಲ್ಲಿ ನಿರ್ಮಿಸಲಾದ ಶ್ರೀಮಹಾಸತೀಶ್ವರಿ ಆಟೊ ನಿಲ್ದಾಣವನ್ನು ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಘಟನೆಗಳು ಸಮಾಜದ ಕಣ್ಣುಗಳಿದ್ದಂತೆ. ಅಯೋಧ್ಯಾ ಫ್ರೆಂಡ್ಸ್ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಸಮಾಜ ಸೇವಕ ಆನಂದ್ ಸಿ.ಕುಂದರ್ ಅವರ 78ನೇ ವರ್ಷದ ಜನ್ಮದಿನದ ಸವಿನೆನಪಿಗಾಗಿ ಅಯೋಧ್ಯ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.

ಅಯೋಧ್ಯಾ ಫ್ರೆಂಡ್ಸ್ ಪ್ರಮುಖರಾದ ಜಗನ್ನಾಥ್ ಅಮೀನ್, ರವೀಂದ್ರ ತಿಂಗಳಾಯ, ಸುರೇಂದ್ರ ಪೂಜಾರಿ ಕೋಡಿ, ಉದಯ್ ಕಾಂಚನ್, ತಿಮ್ಮ ಪೂಜಾರಿ, ಬಾಬು ಕಾಂಚನ್, ಸುದಿನಾ ಕೋಡಿ, ಸಂತೋಷ್ ಕೋಡಿ ಹಾಗೂ ಸಂಘದ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-28-1962537175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.