ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ಸಂಘಟನೆಗಳು ಬಲಗೊಳ್ಳಲಿ

ಮಹಾಸಭೆಯಲ್ಲಿ ಸಚ್ಚಿದಾನಂದ ಮೂರ್ತಿ ಆಶಯ
Last Updated 22 ಸೆಪ್ಟೆಂಬರ್ 2022, 5:30 IST
ಅಕ್ಷರ ಗಾತ್ರ

ಕಾರ್ಕಳ: ‘ಬ್ರಾಹ್ಮಣ ಸಂಘಟನೆಗಳೆಲ್ಲವೂ ಬಲಗೊಳ್ಳಬೇಕು’ ಎಂದು ಕರ್ನಾ ಟಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದರು.

ಇಲ್ಲಿನ ರಾಧಾಕೃಷ್ಣ ಸಭಾ ಭವನದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು, ಜಪ ತಪಗಳ ಮುಖೇನ ಬ್ರಾಹ್ಮಣರು ಒಂದಾಗಿ ಬ್ರಾಹ್ಮಣ್ಯತ್ವವನ್ನು ಉಳಿಸಬೇಕು. ರಾಜ್ಯ ಸರ್ಕಾರದಿಂದ ಬ್ರಾಹ್ಮಣರಿಗೆ ಸಿಗುವ ಸೌಲಭ್ಯಗಳ ಕುರಿತು ತಿಳಿದಿರಬೇಕು ಎಂದರು.

ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ ಮಾತನಾಡಿ, ‘ತಾಲ್ಲೂಕಿನ ಎಲ್ಲಾ ತ್ರಿಮತಸ್ಥ ವಿಪ್ರ ಬಂಧುಗಳು ಒಟ್ಟಾಗಿ ಸೇರಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದರು.

ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ನಾಗರಾಜ್ ರಾವ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೈ. ಸುಧಾಕರ್ ಭಟ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ದಂಪತಿ ಮನೋಹರ್ ರಾವ್, ಆಗಳಿ ರಾಮ್ ಭಟ್, ಪಳ್ಳಿ ರಾಮ್ ಭಟ್, ಕೃಷಿ ಸಾಧಕ ಇನ್ನಾ ಲಕ್ಷ್ಮಿಕಾಂತ್ ರಾವ್, ಪಾಕಶಾಸ್ತ್ರ ಸಾಧಕ ರಾಧಾಕೃಷ್ಣ ಹೆಬ್ಬಾರ್ ಕಬ್ಬಿನಾಲೆ, ವಿಶೇಷ ಸಾಧಕ ಗುಣವಂತೆಶ್ವರ ಭಟ್, ಆದಿತ್ಯ ತಂತ್ರಿ, ಸೌಮ್ಯ ರಾವ್, ಸಮಾಜ ಸೇವಕ ವಿಜಯ್ ಕುಮಾರ್ ತಂತ್ರಿ, ಮುರಳೀಧರ್ ಭಟ್ ಮತ್ತು 42 ಮಂದಿ ಸಾಧಕ ವಿದ್ಯಾರ್ಥಿಗಳನ್ನು, ಕ್ರೀಡಾ ಸಾಧಕ 75 ವಿಪ್ರರನ್ನು ಅಭಿನಂದಿಸಲಾಯಿತು.

ಒಂಬತ್ತು ಬಗೆಯ ಸಮಿಧೆಗಳ ಗಿಡಗಳನ್ನು ವಿತರಿಸಲಾಯಿತು. ಒಬ್ಬ ವಿದ್ಯಾರ್ಥಿಗೆ ವೇತನ ಹಾಗೂ ಒಬ್ಬ ವಿಪ್ರರಿಗೆ ವೈದ್ಯಕೀಯ ವೆಚ್ಚದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ನಿಗಮದ ಜೊತೆ ನಿರ್ದೇಶಕಿ ವತ್ಸಲಾ ನಾಗೇಶ್ ಹಾಗೂ ಲತಾ ಸಚ್ಚಿದಾನಂದ ಮೂರ್ತಿ, ವಿತರಣೆ ನಿರೂಪಿಸಿದರು. ಕಾನೂನು ಸಲಹೆಗಾರ ಜಿ. ಮುರಳೀಧರ್ ಭಟ್, ರಮೇಶ್ ರಾವ್ ಲೆಕ್ಕ ಪರಿಶೋಧಕ ರಮೇಶ್ ರಾವ್ ಇದ್ದರು. ಸಂಘದ ಉಪಾಧ್ಯಕ್ಷ ಕೇಶವ್ ರಾವ್ ಸ್ವಾಗತಿಸಿದರು. ಅನುರಾಧ ಉಡುಪ ಹಾಡಿದರು. ಕಾರ್ಯದರ್ಶಿ ಬಾಲಕೃಷ್ಣ ರಾವ್ ವಾರ್ಷಿಕ ವರದಿ ಮಂಡಿಸಿದರು. ಕೊಶಾಧಿಕಾರಿ ಕೇಶವ ಮರಾಠೆ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಚಂದ್ರಶೇಖರ್ ಎಂ. ವಂದಿಸಿದರು. ಉಪಾಧ್ಯಕ್ಷ ಕೃಷ್ಣ ಭಟ್, ಸತೀಶ್ ರಾವ್ ಕರ್ವಾಲು ವಿದ್ಯಾರ್ಥಿವೇತನ ಮತ್ತು ಬಹುಮಾನವಿತರಣೆ ನಿರೂಪಿಸಿದರು.

ಬೆಳಿಗ್ಗೆ ವಾದಿರಾಜ ಆಚಾರ್ ಹಾಗೂ ದಿನೇಶ್ ಭಟ್ ಕೈಲಾಜೆ ನೇತೃತ್ವದಲ್ಲಿ ಗಾಯತ್ರಿ ಜಪ ಯಜ್ಞ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT