ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಹ್ಮಾವರ | ‘ಕೃಷಿ ವಿಚಾರಗಳನ್ನು ಜನರಿಗೆ ತಲುಪಿಸಿ‘

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಕೆ.ಡಿ.ಪಿ ಸಭೆಯಲ್ಲಿ ಯಶಪಾಲ್ ಸುವರ್ಣ
Published : 14 ಸೆಪ್ಟೆಂಬರ್ 2024, 6:12 IST
Last Updated : 14 ಸೆಪ್ಟೆಂಬರ್ 2024, 6:12 IST
ಫಾಲೋ ಮಾಡಿ
Comments

ಬ್ರಹ್ಮಾವರ: ಗರಿಷ್ಠ ಜನರಿಗೆ ಪ್ರಯೋಜನ ದೊರೆಯಲು ಕೃಷಿಗೆ ಸಂಬಂಧಪಟ್ಟ ವಿಚಾರಗಳನ್ನು ಸಹಕಾರಿ ಸಂಘ, ಹಾಲು ಉತ್ಪಾದಕ ಸಂಘಗಳ ಮುಖಾಂತರ, ಮಾಹಿತಿ ಕರಪತ್ರ ಮೂಲಕ ಪ್ರತಿಯೊಬ್ಬರಿಗೂ ದೊರೆಯುವಂತೆ ಕ್ರಮ ತೆಗೆದುಕೊಳ್ಳಲು ಶಾಸಕ ಯಶಪಾಲ್ ಸುವರ್ಣ ಸೂಚಿಸಿದರು.

ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು ರಸ್ತೆ ಬದಿಯಲ್ಲಿರುವ, ವಿದ್ಯುತ್ ಕಂಬಗಳ ಮೇಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಪ್ರಕ್ರಿಯೆ ನೆಪದಲ್ಲಿ ವಿಳಂಬ ಮಾಡಬಾರದು. ಮಳೆ ಹಾನಿ, ಜಾನುವಾರು ಸಮೀಕ್ಷೆ, ಶೂನ್ಯ ಬಡ್ಡಿ ಕೃಷಿ ಸಾಲ ಮತ್ತಿತರ ವಿಚಾರಗಳ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೋಟ ಮಣೂರಿನಲ್ಲಿ ಕೆ.ಪಿ.ಎಸ್. ಶಾಲೆ ಪ್ರಾರಂಭದ ಕುರಿತು ಇಲಾಖಾ ವತಿಯಿಂದ ಕ್ರಮ ವಹಿಸುವಂತೆ, ಎಲ್ಲಾ‌ ಅಧಿಕಾರಿಗಳು ಸಮರ್ಪಕ ಅಂಕಿ ಅಂಶ, ದಾಖಲೆ, ಮಾಹಿತಿಗಳೊಂದಿಗೆ ಮುಂದಿನ ಸಭೆಗೆ ಹಾಜರಾಗುವಂತೆ ಸೂಚಿಸಿದರು.

ಕೆಲವು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ತೀರಾ ವಿಳಂಬವಾಗುತ್ತಿರುವುದಕ್ಕೆ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಳೆಗಾಲ ಕಳೆಯುವುದಕ್ಕೆ ಕಾಯದೆ ರಸ್ತೆ ಹೊಂಡಗಳನ್ನು ಮುಚ್ಚುವುದಕ್ಕೆ ತುರ್ತು ಕ್ರಮ ತೆಗೆದುಕೊಳ್ಳುವಂತೆ, ಮತ್ಸ್ಯಾಶ್ರಯ ಯೋಜನೆಯ ಫಲಾನುಭವಿಗಳಿಗೆ ಶೀಘ್ರ ಮಂಜೂರಾತಿ ನೀಡುವಂತೆ ಆಗ್ರಹಿಸಿದರು. ಇ–ಸ್ವತ್ತು ವಿತರಣೆ, ವಿನ್ಯಾಸ ನಕ್ಷೆ ಅನುಮೋದನೆ ಕುರಿತು ನಿರ್ಣಯಕ್ಕೆ ನಿರ್ಧರಿಸಲಾಯಿತು.

ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ. ಇಬ್ರಾಹಿಂಪುರ್ ಇದ್ದರು. ಸಹಾಯಕ ನಿರ್ದೇಶಕ ಮಹೇಶ ಕೆ. ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT