ಬೈಂದೂರು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಟ್ಟಿರುವ, ಸೋಮೇಶ್ವರ ರಸ್ತೆಯ ಪಡುವರಿಯಲ್ಲಿರುವ ಪ್ರಾಚೀನ ಹೆಗ್ಗೇರಿ ಕೆರೆ ಪಾಳು ಬಿದ್ದಿದ್ದು, ಹೂಳು ತುಂಬಿಕೊಂಡು ದುಃಸ್ಥಿತಿಯಲ್ಲಿದೆ. ಕೆರೆಯನ್ನು ಸುಸ್ಥಿತಿಗೆ ತರಲು ಶೇ 80ರಷ್ಟು ಕಾಮಗಾರಿ ನಡೆಯಬೇಕಿದೆ.

ಅನಾದಿ ಕಾಲದಿಂದ ಜೈನ ಸಮುದಾಯಕ್ಕೆ ಸೇರಿದ್ದ ಹೆಗ್ಗೇರಿ ಕೆರೆಯು ಪ್ರಸ್ತುತ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಸುಮಾರು 1 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದೆ. 15 ವರ್ಷಗಳ ಹಿಂದೆ ಕೆರೆಯ ಒಂದು ಪಾರ್ಶ್ವದ ಮನೆಗಳಿಗೆ ಹಾನಿಯಾಗದಂತೆ ಸಿಮೆಂಟ್, ಶಿಲೆ ಕಲ್ಲುಗಳಿಂದ ದಂಡೆ ಕಟ್ಟಲಾಗಿತ್ತು. ಐದಾರು ವರ್ಷಗಳ ಹಿಂದೆ ಒಮ್ಮೆ ಹೂಳೆತ್ತಲಾಗಿತ್ತು. ಈಗ ಪುನಃ ಆಸುಪಾಸಿನ ತ್ಯಾಜ್ಯ, ಹೂಳು ತುಂಬಿಕೊಂಡಿದೆ. ಪಟ್ಟಣ ಪಂಚಾಯಿತಿ ಸಮಿತಿ ರಚನೆಗೊಳ್ಳದ ಕಾರಣ ಸರ್ಕಾರದಿಂದ ಅನುದಾನಗಳು ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಗುರುರಾಜ್ ಗಂಟಿಹೊಳೆ ಶಾಸಕರಾದ ಬಳಿಕ ಬೈಂದೂರು ವ್ಯಾಪ್ತಿಯ ಪ್ರಮುಖ ಕೆರೆಗಳನ್ನು ಹೂಳೆತ್ತಿ ಪುನರುಜ್ಜೀವಗೊಳಿಸುವ ಯೋಜನೆ ರೂಪಿಸಿಕೊಂಡಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ.

ಕ್ಷೀಣಿಸುತ್ತಿರುವ ಅಂತರ್ಜಲ ಮರುಭರ್ತಿಗೊಳಿಸಲು ಸಂಬಂಧಪಟ್ಟ ಇಲಾಖೆಗಳು, ಸ್ಥಳೀಯ, ಇತರ ಪ್ರಾಧಿಕಾರಿಗಳ ನೆರವಿನೊಂದಿಗೆ ಸಮಗ್ರ ಸಂಪರ್ಕವನ್ನು ಸಾಧಿಸಿಕೊಳ್ಳುವ ಮೂಲಕ ಕೆರೆಗಳನ್ನು, ಕೊಳಗಳನ್ನು, ಸರೋವರಗಳನ್ನು ರಕ್ಷಿಸುವುದು, ಸಂರಕ್ಷಿಸುವುದು, ಜೀರ್ಣೋದ್ಧಾರಗೊಳಿಸುವುದು, ಪುನರ್ ರೂಪಿಸುವುದು ಮತ್ತು ಪೂರ್ವಸ್ಥಿತಿಗೆ ತರುವುದು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಕಾರ್ಯವಾಗಿದ್ದು ಇಂತಹ ಹಳೆಯ ಕೆರೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಅನುದಾನವನ್ನು ಒದಗಿಸಿಕೊಡಬೇಕಾಗಿದೆ ಎನ್ನುತ್ತಾರೆ ಜನರು.

ಮಳೆ ನೀರನ್ನು ಕೆರೆ ಕಟ್ಟೆಗಳಲ್ಲಿ ಹಿಡಿಯುವ ಹಿರಿಯರ ಜಾಣ್ಮೆಯನ್ನು ಇಂದು ನಾವು ಮರೆತಿದ್ದೇವೆ. ಭವಿಷ್ಯದಲ್ಲಿ ನಮ್ಮ ನೀರಿನ ಸಂಕಷ್ಟ ಇನ್ನೂ ಹೆಚ್ಚಲಿದೆ, ಅಳಿದುಳಿದ ಕೆರೆಗಳ ಸಂರಕ್ಷಣೆ, ಹೊಸ ಕೆರೆಗಳ ನಿರ್ಮಾಣದ ಮೂಲಕ ನೀರ ನೆಮ್ಮದಿ ಸಾಧಿಸುವ ಹೊಣೆ ನಮ್ಮ ಮೇಲಿದೆ. ಜಲಸಾಕ್ಷರತೆಯ ಮೂಲಕ ನಮ್ಮ ಹೆಜ್ಜೆ ಕೆರೆ ಸಂರಕ್ಷಣೆಯತ್ತ ಸಾಗಬೇಕಿದೆ ಎಂದೂ ಜನರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.