ಬೈಂದೂರು: ಮರವಂತೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಗುಡಿಸಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬರ ಕುಟುಂಬಕ್ಕೆ ವಿಶ್ವಕರ್ಮ ಸಮುದಾಯದವರು ವಿಶ್ವಕರ್ಮ ಸಮಾಜ ಸೇವಾ ಸಂಘ, ಊರಿನ, ಸಮುದಾಯದ ದಾನಿಗಳ ಸಹಕಾರದಲ್ಲಿ ನಿರ್ಮಿಸಿಕೊಟ್ಟ ‘ಶ್ರೀ ವಿಶ್ವಕರ್ಮ’ ಮನೆಯ ಹಸ್ತಾಂತರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಉಪ್ರಳ್ಳಿ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, ‘ಜನರು ಮಾಡುವ ಸಣ್ಣ ಸಹಾಯ ಬಡ ಕುಟುಂಬಕ್ಕೆ ಬೆಳಕು, ಭದ್ರತೆಯ ಆಸರೆ ನೀಡಬಲ್ಲದು. ಈ ನಿಟ್ಟಿನಲ್ಲಿ ಸಮಾಜ ಸೇವಾ ಸಂಘಗಳು ದಾನಿಗಳ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸುರಕ್ಷಿತ ನೆಲೆ ಕಲ್ಪಿಸುವ ಪ್ರಯತ್ನ ಮಾಡಬೇಕು. ಈ ಮನೆ ನಿರ್ಮಾಣಕ್ಕೆ ಕೈ ಜೋಡಿಸಿದ ಪ್ರತಿಯೊಬ್ಬರ ಕುಟುಂಬಕ್ಕೆ ಕಾಳಿಕಾಂಬೆಯ ಅನುಗ್ರಹ ಇರಲಿ’ ಎಂದು ಆಶಿಸಿದರು.

ರಥ ಶಿಲ್ಪಿ, ದಾನಿ ರಾಜಗೋಪಾಲ್ ಆಚಾರ್ಯ ಕೋಟೇಶ್ವರ ನಾಮಫಲಕ ಅನಾವರಣ ಮಾಡಿದರು. 2ನೇ ಮೊಕ್ತೇಸರ ಉದಯ ಆಚಾರ್ಯ ಬೆಲ್ತೂರು, 3ನೇ ಮೊಕ್ತೇಸರ ಶ್ರೀಧರ್ ಆಚಾರ್ಯ ಮರವಂತೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಉಳ್ಳೂರು, ಮಾಜಿ ಮೊಕ್ತೇಸರ ಕೆ.ಎನ್. ವೆಂಕಟೇಶ್ ಆಚಾರ್ಯ ಕುಂದಾಪುರ, ಮರವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ ಮರವಂತೆ, ಸದಸ್ಯರು ಪಾಲ್ಗೊಂಡಿದ್ದರು.

ಗುತ್ತಿಗೆದಾರ ಜಗದೀಶ್ ಆಚಾರ್ಯ ಮರವಂತೆ, ಮಾಗಣೆ ಮೊಕ್ತೇಸರ ಕೃಷ್ಣಯ್ಯ ಆಚಾರ್ಯ ಮರವಂತೆ ಮನೆ ನಿರ್ಮಾಣದ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-28-1683363801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.