ಬೈಂದೂರು: 94ಸಿ ಕಡತ ವಿಲೇವಾರಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡಿದರು.
94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ವಿಲೇವಾರಿ ಆಗಿಲ್ಲ. ಸಣ್ಣ ಪುಟ್ಟ ತಾಂತ್ರಿಕ ದೋಷ ಮುಂದಿಟ್ಟುಕೊಂಡು ಹೀಗೆ ಮಾಡುವುದು ಸರಿಯಲ್ಲ. ಶೀಘ್ರ ಅರ್ಜಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅರ್ಜಿದಾರರು, ಸಾರ್ವಜನಿಕರು ಒತ್ತಾಯಿಸಿದರು.
ಅರ್ಜಿ ವಿಲೇವಾರಿಗೆ ಆಗುತ್ತಿರುವ ತೊಂದರೆ, ಕಾನೂನು ಅಡೆತಡೆಗಳನ್ನು ವಿ.ಎ, ತಹಶೀಲ್ದಾರ್ ಜೊತೆ ಚರ್ಚಿಸಲಾಯಿತು. ತಾಂತ್ರಿಕ ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸಲು ಸೂಚಿಸಲಾಯಿತು.