ಬೈಂದೂರು: ದೇವರನ್ನು ನಾವು ಶ್ರದ್ಧೆ, ಭಕ್ತಿಯಿಂದ ಆರಾಧಿಸಿದಾಗ ನಮ್ಮ ಸಂಕಷ್ಟಗಳು ದೂರವಾಗಿ ಯೋಗ, ಭಾಗ್ಯ ಮತ್ತು ಮೋಕ್ಷ ದೊರೆಯುತ್ತದೆ ಎಂದು ಹಾಸನ ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಕರಸ್ಥಳ ಜಗದ್ಗುರು ನಾಗಲಿಂಗ ಸ್ವಾಮಿ ಹಾಗೂ ವಿಶ್ವಕರ್ಮೇಶ್ವರ ಸಾನ್ನಿಧ್ಯವಿರುವ ಉಪ್ರಳ್ಳಿ ಉಳ್ಳೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಲಕ್ಷ ಕುಂಕುಮಾರ್ಚನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಆಶೀರ್ವಚನ ನೀಡಿದರು.

ಶಿವನಿಗೆ ಅಭಿಷೇಕ, ವಿಷ್ಣುವಿಗೆ ಅಲಂಕಾರ ಹೇಗೆ ಪ್ರಿಯವೋ ಹಾಗೆಯೇ ದೇವಿಗೆ ಅರ್ಚನೆ ಅತ್ಯಂತ ಪ್ರಿಯ. ಲಕ್ಷ ಕುಂಕುಮಾರ್ಚನೆಯಿಂದ ದೇವಿ ಸಂತುಷ್ಟಗೊಂಡು ಎಲ್ಲರನ್ನೂ ಅನುಗ್ರಹಿಸಿದ್ದಾಳೆ ಎಂದರು.

ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಸಂಪತ್ತು ಸದ್ವಿನಿಯೋಗವಾದಾಗ ಸಾರ್ಥಕವಾಗುತ್ತದೆ. ಸತ್ಕಾರ್ಯಕ್ಕಾಗಿ ನಮ್ಮ ಸಂಪತ್ತನ್ನು ವಿನಿಯೋಗಿಸಿದರೆ ಮಹತ್ತರವಾಗಿ ಅದು ನಮಗೆ ವಾಪಸ್ ಸಿಗುತ್ತದೆ. ಲಕ್ಷ ಕುಂಕುಮಾರ್ಚನೆಯಿಂದ ಲಕ್ಷ ಲಕ್ಷ ದೋಷಗಳು ಪರಿಹಾರವಾಗಿ ಲಕ್ಷ ಬೇಡಿಕೆಗಳು ಈಡೇರಲಿ ಎಂದರು.

ಎನ್.ವಿ.ಕೆ. ಸಭಾಂಗಣದಲ್ಲಿ ನಡೆದ ಲಕ್ಷ ಕುಂಕುಮಾರ್ಚನೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ಪ್ರಸಾದ ಪಡೆದರು.

ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, ಎರಡನೇ ಮೊಕ್ತೇಸರ ಉದಯ ಆಚಾರ್ಯ ಕಟ್ಬೆಲ್ತೂರು, ಮೂರನೇ ಮೊಕ್ತೇಸರ ಶ್ರೀಧರ ಆಚಾರ್ಯ ಮರವಂತೆ, ಕಾಳಿಕಾಂಬಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಇದ್ದರು. ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ ಸ್ವಾಗತಿಸಿ, ನಿರೂಪಿಸಿದರು. ಮಧ್ಯಾಹ್ನ ‘ಶ್ರೀಕೃಷ್ಣ ಪಾರಿಜಾತ- ನರಕಾಸುರ ವಧೆ’ ಯಕ್ಷಗಾನ ಬಯಲಾಟ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-28-856073879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.