ಬೈಂದೂರು: ಇಲ್ಲಿನ ಮಹತೋಭಾರ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಏಪ್ರಿಲ್16ರಿಂದ 24ರ ತನಕ ಜರುಗಲಿದ್ದು, ಆ ಪ್ರಯುಕ್ತ ಗುರುವಾರ ಕೂಟಾಡಿ ರಾಮಕೃಷ್ಣ ಭಟ್ ಕಿರಿಮಂಜೇಶ್ವರ ಅವರ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು.

ಬೆಳಿಗ್ಗೆ ದೇವಳದಲ್ಲಿ ಕಲಶ ಪ್ರತಿಷ್ಠೆ, ಕಂಕಣಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆದವು.

ದೇವಳದ ಅರ್ಚಕರಾದ ಮಂಜುನಾಥ ಮಯ್ಯ, ನಾಗರಾಜ ಭಟ್, ರಾಜೇಶ ಐತಾಳ್ ಹಾಗೂ ಶಿವಾನಂದ ಅಡಿಗ ಇದ್ದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ ಬೈಂದೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ದೇವಳದ ಸಿಬ್ಬಂದಿ ಭಾಗವಹಿಸಿದ್ದರು.

ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಮೇ 16ರಂದು ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ 23ರಂದು ಅವಭೃಥೋತ್ಸವ, 24ರಂದು ಸಂಜೆ ನಗರೋತ್ಸವ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-28-56065126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.