ಬೈಂದೂರು: ದೇಶದ ಇತಿಹಾಸದಲ್ಲಿ ಹಣಗಳಿಸಿದ ಯಾವುದೇ ವ್ಯಕ್ತಿಯ ಹೆಸರು ಉಳಿಯುವುದಿಲ್ಲ ಬದಲಾಗಿ ಯಾರು ದಾನ, ಧರ್ಮ, ಸತ್ಕರ್ಮಗಳನ್ನು ಮಾಡುತ್ತಾರೂ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ತಮ್ಮ ತಂದೆ ತಾಯಿಗಳು ಭೌತಿಕವಾಗಿ ಇಲ್ಲದಿದ್ದರೂ ರಾಜಗೋಪುರದ ಸೇವಾಕರ್ತರಾಗಿ ಜಯಶೀಲ ಶೆಟ್ಟರು ತಂದೆ ತಾಯಿಯ ಆಸೆಯನ್ನು ತೀರಿಸಿದ್ದಾರೆ ಎಂದು ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠಾಧೀಶ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.

ತಾಲ್ಲೂಕಿನ ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಕ್ಷ್ಮಿ ಹೆಬ್ಬಾಳಕರ ಧ್ವಜಸ್ತಂಭ ಹಾಗೂ ಹೆಬ್ಬಾಗಿಲು ಉದ್ಘಾಟಿಸಿ ಮಾತನಾಡಿ ದೇವಸ್ಥಾನಗಳ ಜೀರ್ಣೋದ್ದಾರ ಆದರೆ ಮಾನವ ಕುಲ ಅಭಿವೃದ್ಧಿಯಾದಂತೆ. ದೇವರ ನಾಡು ಎಂದು ಹೆಸರು ಪಡೆದಿರುವ ಉಡುಪಿ ಜಿಲ್ಲೆಯ ದೇವಾಲಯಗಳಲ್ಲಿ ಆಶೀರ್ವಾದದ ಜೊತೆ ಅನ್ನಪ್ರಸಾದ ಸಿಗುತ್ತಿರುವುದು ವಿಶೇಷ ಎಂದು ಹೇಳಿದರು.

ಮುಖಂಡ ಬಾಲಚಂದ್ರ ಜಾರಕಿಹೊಳಿ ಭೋಜನಶಾಲೆ ಮತ್ತು ಯಾಗಶಾಲೆ ಉದ್ಘಾಟಿಸಿದರು. ರಾಜಗೋಪುರದ ಸೇವಾಕರ್ತ ಎಚ್. ಜಯಶೀಲ ಎನ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಕಿಶೋರಕುಮಾರ್ ಹೆಗ್ಡೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಮೆರ್ಟ, ಖಜಾಂಚಿ ಹೆಚ್. ವಿಜಯ್ ಶೆಟ್ಟಿ ಪಾಲ್ಗೊಂಡಿದ್ದರು.

ಆಡಳಿತ ಸಮಿತಿಯ ಗೌರವಾಧ್ಯಕ್ಷ, ರಾಜಗೋಪುರ ಸೇವಾಕರ್ತ ಎಚ್ ಜಯಶೀಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆ.ಸಿ ರಾಜೇಶ್ ಹಾಗೂ ಆರ್.ಜೆ ನಯನ ನಿರೂಪಿಸಿದರು. ಕಾಲ್ತೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ವಂದಿಸಿದರು. ಮಂಗಳೂರಿನ ಕುಳಾಯಿ ಕಲಾಕುಂಭ ನಾಟಕ ತಂಡದಿಂದ ‘ಪರಮಾತ್ಮ ಪಂಜುರ್ಲಿ’ ನಾಟಕ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-28-1091090519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.