ಭಾನುವಾರ, ಜುಲೈ 3, 2022
24 °C

ಮನೆಯೊಳಗೆ ನುಗ್ಗಿದ ಕಾರು: ಮಗು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯಡಕ: ಉಡುಪಿ ಜಿಲ್ಲೆಯ ಹಿರಿಯಡಕ ಕೊಂಡಾಡಿ ಭಜನೆ ಕಟ್ಟೆ ಬಳಿ ಶನಿವಾರ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಯೊಳಗೆ ನುಗ್ಗಿದ್ದು, ತೊಟ್ಟಲಿನಲ್ಲಿದ್ದ ಮಗು ಅದೃಷ್ಟವಶಾತ್ ಪಾರಾಗಿದೆ.

ಸ್ಥಳೀಯ ನಿವಾಸಿ ಸಾಧು ಶೆಟ್ಟಿ ಅವರ ಮಗ ಹರೀಶ್ ಶೆಟ್ಟಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬ ಪಾದಚಾರಿ ಕೂಲಿ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ‌ ಎಂದು ತಿಳಿದು ಬಂದಿದೆ. ಹುಂಡೈ ಐ ಟ್ವೆಂಟಿ ಕಾರು ಚಾಲಕನ ನಿಯಂತ್ರಣ ತಪ್ಪಿ, ಕೊಂಡಾಡಿ ಪುತ್ತು ನಾಯಕ್ ಅವರ ಮನೆಗೆ‌ ಡಿಕ್ಕಿ ಹೊಡೆದಿದೆ. ಮನೆಯ ತೊಟ್ಟಲಿನಲ್ಲಿ ಪುತ್ತು ನಾಯಕ್ ಅವರ ಮೊಮ್ಮಗು‌ ಇತ್ತು ಎನ್ನಲಾಗಿದೆ. ಮಗು‌ ಅಪಾಯದಿಂದ ಪಾರಾಗಿದ್ದು, ಮನೆಗೆ‌ ಹಾನಿಯಾಗಿದೆ‌. ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು