ಮಂಗಳವಾರ, ನವೆಂಬರ್ 12, 2019
25 °C
ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ

ಡಿಕೆಶಿ ಬಿಡುಗಡೆಗೆ ಚಂಡಿಕಾಯಾಗ

Published:
Updated:

ಉಡುಪಿ: ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ್ ಶೀಘ್ರ ಬಿಡುಗಡೆಯಾಗಲಿ ಎಂದು ಡಿಕೆಶಿ ಸಂಬಂಧಿಗಳು ಹಾಗೂ ಅಭಿಮಾನಿಗಳು ಸೋಮವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ ನಡೆಸಿದರು.

ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಮುಂದಿಟ್ಟು ಅರ್ಚಕರು ಯಾಗ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಶಿವಕುಮಾರ್ ಅವರಿಗೆ ಎದುರಾಗಿರುವ ಆಪತ್ತುಗಳು ನಿವಾರಣೆಯಾಗಬೇಕು ಹಾಗೂ ರಾಜಕೀಯ ಜೀವನದಲ್ಲಿ ಏಳ್ಗೆ ಸಿಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಕೊಲ್ಲೂರು ಅರ್ಚಕರು ತಿಳಿಸಿದ್ದಾರೆ.

ಪೂಜೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕೊಡವೂರು ಸೇರಿದಂತೆ ಹಲವು ಮುಖಂಡರು ಇದ್ದರು.

ಪ್ರತಿಕ್ರಿಯಿಸಿ (+)