ರಣದೀಪ್ ಸಿಂಗ್ ಎಂಬ ವ್ಯಕ್ತಿ, ತಾನು ಭಾರತೀಯ ಸೇನೆಯಲ್ಲಿದ್ದು, ಕಾನ್‌ಪುರದಿಂದ ಉಡುಪಿಗೆ ವರ್ಗಾವಣೆಯಾಗಿದೆ. ನಿಮ್ಮ ಫ್ಲ್ಯಾಟ್ ಇಷ್ಟವಾಗಿದೆ ಎಂದು ಹೇಳಿ ಬ್ಯಾಂಕ್ ಖಾತೆಯ ವಿವರ ಪಡೆದು, ಆರ್ಮಿಯ ನಿಯಮದಂತೆ ಅಕೌಂಟ್‌ನಲ್ಲಿ ಕನಿಷ್ಠ ಮೊತ್ತ ₹1 ಲಕ್ಷ ಇದ್ದಲ್ಲಿ ಮಾತ್ರ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯ ಎಂದು ತಿಳಿಸಿದ್ದನು. ಬಳಿಕ ದೂರುದಾರರಿಂದ ಗೂಗಲ್ ಪೆ ಮೂಲಕ ಕ್ರಮವಾಗಿ ₹60 ಸಾವಿರ, ₹25 ಸಾವಿರ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಬಳಿಕ ಆತನಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ ಎಂದು ನರೇಂದ್ರ ಬಾಬು ದೂರು ನೀಡಿದ್ದಾರೆ.