ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಿಕ ಮಟ್ಟ ಹೆಚ್ಚಿಸುವ ಚೆಸ್: ಶ್ರೀಕಾಂತ್

ಕುಂದಾಪುರದಲ್ಲಿ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿ ಆರಂಭ
Last Updated 16 ಅಕ್ಟೋಬರ್ 2022, 6:09 IST
ಅಕ್ಷರ ಗಾತ್ರ

ಕುಂದಾಪುರ: ಭಾರತದ ಪುರಾತನ ಹಾಗೂ ದೇಶಿಯ ಒಳಾಂಗಣ ಕ್ರೀಡೆಯಾಗಿ ಜನಪ್ರಿಯವಾಗಿದ್ದ ಚೆಸ್ ಕ್ರೀಡೆಯು ಆಟಗಾರನ ಮಾನಸಿಕ ಆರೋಗ್ಯವನ್ನು ಪ್ರಬುದ್ಧಗೊಳಿಸಿ ಬೌದ್ಧಿಕ ಮಟ್ಟ ಹೆಚ್ಚಿಸುತ್ತದೆ. ಹೀಗಾಗಿ ಮಾನಸಿಕ ಒತ್ತಡ ಹಾಗೂ ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಈ ಕ್ರೀಡೆ ಸಹಕಾರಿ ಎಂದು ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಶ್ರೀಕಾಂತ್.ಕೆ ಅಭಿಪ್ರಾಯಪಟ್ಟರು.

ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ನಿರ್ಮಲ ಮನಸ್ಸು ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಕ್ರೀಡೆ ಗಳಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.

ಅದೃಷ್ಟದ ಜತೆಯಲ್ಲಿ ಚುರುಕುತನ, ಚಾಣಾಕ್ಷತೆ, ಬೌದ್ಧಿಕ ಶಕ್ತಿ, ಜಾಣ್ಮೆ ಹಾಗೂ ಮುಂದಿನ ದೂರಗಾಮಿ ಚಿಂತನೆಯನ್ನು ಊಹಿಸಬಲ್ಲ ಆಟಗಾರರು ಮಾತ್ರ ಚೆಸ್ ಆಟದಲ್ಲಿ ಯಶಸ್ವಿಯಾಗುತ್ತಾರೆ ಎಂದು ಕುಂದಾಪುರದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್. ಪೂಜಾರಿ ಹೇಳಿದರು.

ಡಿಜಿಫ್ಲಿಕ್ ಇನ್ಶೂರೆನ್ಸ್ ಮತ್ತು ರಂಜನ್ ನಗರಕಟ್ಟೆ ಸಕ್ಸಸ್ ಅಕಾಡೆಮಿ ಸಂಸ್ಥಾಪಕ ಸಿಇಒ ರಂಜನ್ ರಮೇಶ್ ನಾಗರಕಟ್ಟೆ, ಉಡುಪಿ ಜಿಲ್ಲಾ ಚೆಸ್ ಸಂಸ್ಥೆ ಅಧ್ಯಕ್ಷ ಅಮಿತ್ ಕುಮಾರ್ ಶೆಟ್ಟಿ, ಮುಖ್ಯ ಆರ್ಬಿಟರ್ ವಸಂತ್ ಬಿ.ಎಚ್, ಕೋಚ್‌ ಬಾಬು ಪೂಜಾರಿ ಇದ್ದರು.

ರಾಜ್ಯ ಮಟ್ಟದ ಚೆಸ್‌ನಲ್ಲಿ ಗೆದ್ದು, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಅವನಿ ಆಚಾರ್ಯ ಹಾಗೂ ಪ್ರಗತಿ ಕೆ.ನಾಯಕ್ ಅವರನ್ನು ಗೌರವಿಸಲಾಯಿತು. ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿದರು, ಸೌಂದರ್ಯ ರೂಪಿಸಿದರು. ಶಿವನಾರಾಯಣ ಐತಾಳ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT