ಕಂದಮ್ಮ ಸಾವಿನ ಪ್ರಕರಣ: ತಾಯಿ ವಿರುದ್ಧ ಪ್ರಕರಣ

ಸೋಮವಾರ, ಜೂಲೈ 22, 2019
27 °C
ಆರೋಪಿಗೆ ಮಾನಸಿಕ ಖಿನ್ನತೆಗೆ ಚಿಕಿತ್ಸೆ

ಕಂದಮ್ಮ ಸಾವಿನ ಪ್ರಕರಣ: ತಾಯಿ ವಿರುದ್ಧ ಪ್ರಕರಣ

Published:
Updated:

ಉಡುಪಿ: ಕುಂದಾಪುರ ತಾಲ್ಲೂಕಿನ ಎಡಮೊಗೆಯ ಕುಮ್ಟಿಬೇರು ಗ್ರಾಮದಲ್ಲಿ ಈಚೆಗೆ 1 ವರ್ಷ 3 ತಿಂಗಳ ಹೆಣ್ಣು ಮಗುವನ್ನು ಅಪಹರಣ ಮಾಡಲಾಗಿದೆ ಎಂಬ ನಾಟಕವಾಗಿ ಸಿಕ್ಕಿಬಿದ್ದ ತಾಯಿ ರೇಖಾ ನಾಯ್ಕ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಆರೋಪಿಯು ವಿಚಾರಣೆ ವೇಳೆ ‘ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಇಬ್ಬರು ಮಕ್ಕಳೊಂದಿಗೆ ಕುಬ್ಜಾ ಹೊಳೆಗೆ ಇಳಿದ ಸಂದರ್ಭ ಕಂಕುಳಲ್ಲಿದ್ದ ಸಾನ್ವಿಕಾ ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಲಂ 302, 307 ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರೇಖಾ ನಾಯ್ಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದರಿಂದ ಶನಿವಾರ ಆಕೆಯನ್ನು ಡಾ.ಎ.ವಿ.ಬಾಳಿಗಾ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಿನ್ನತೆಯಿಂದ ಹೊರಬಂದ ಬಳಿಕ ಪ್ರಕರಣದ ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !