ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಬೈಲು ರಸ್ತೆಯ ಗುಂಡಿ ಮುಚ್ಚಿಸಿ

Last Updated 28 ಸೆಪ್ಟೆಂಬರ್ 2022, 15:36 IST
ಅಕ್ಷರ ಗಾತ್ರ

ಅಂಬಾಗಿಲು ಹಾಗೂ ಗುಂಡಿಬೈಲು ರಸ್ತೆಯಲ್ಲಿರುವ ಶಿವಳ್ಳಿ ಪಟೇಲರ ಮನೆಯ ಎದುರಿನ ರಸ್ತೆಯಲ್ಲಿ ದೊಡ್ಡದಾದ ಹೊಂಡ ನಿರ್ಮಾಣವಾಗಿದೆ. ತಿಂಗಳ ಹಿಂದೆ ಸಣ್ಣದಿದ್ದ ಗುಂಡಿ ಈಗ ಹೊಂಡದಂತೆ ಅಗಲವಾಗಿದೆ. ರಾತ್ರಿಯ ಹೊತ್ತು ಹಾಗೂ ಮಳೆ ಬರುತ್ತಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಹೊಂಡದಲ್ಲಿ ಇಳಿದರೆ ಅವಘಡಗಳು ಖಚಿತ. ಸಾರ್ವಜನಿಕರು ಹೊಂಡಕ್ಕೆ ಕಾಲಿಟ್ಟರೆ ಮೂಳೆ ಮುರಿದುಕೊಳ್ಳಬೇಕಾಗುತ್ತದೆ. ರಸ್ತೆಯ ತುಂಬೆಲ್ಲ ಹೊಂಡಬಿದ್ದಿರುವುದು ಸ್ಥಳೀಯ ಜನಪ್ರತಿನಿಧಿಗೆ ತಿಳಿದಿದ್ದರೂ ಮುಚ್ಚಿಸುವ ಕರ್ತವ್ಯ ಮಾಡಿಲ್ಲ. ಹೀಗಿರುವ ಹೊಂಡ ಮತ್ತಷ್ಟು ದೊಡ್ಡದಾಗಿ ಹಲವರು ಬಿದ್ದು ಅನಾಹುತಗಳಾಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಗುಂಡಿ ಮುಚ್ಚಿಸಬೇಕು.

–ಸ್ಥಳೀಯ ನಾಗರಿಕರು

ಉಡುಪಿಯ ಕಲ್ಸಂಕ ಜಂಕ್ಷನ್‌ನಲ್ಲಿ ಅಂಬಾಗಿಲು ಕಡೆಗೆ ಸಾಗುವ ವಾಹನಗಳು ಫ್ರೀ ಲೆಫ್ಟ್‌ ತೆಗೆದುಕೊಳ್ಳಲು ಅನುಕೂಲವಾಗಲು ವರ್ಷಗಳ ಹಿಂದೆ ರಸ್ತೆಯ ಮಧ್ಯೆ ಹಾಕಲಾಗಿದ್ದ ಡಿವೈಡರ್ ಮಾದರಿಯ ಪ್ಲಾಸ್ಟಿಕ್ ತುಂಡುಗಳು ಸಂಪೂರ್ಣ ಹಾಳಾಗಿವೆ. ಉಡುಪಿಯ ಖಾಸಗಿ ಸಿಟಿ ಬಸ್‌ ನಿಲ್ದಾಣದ ಎದುರು ಕೂಡ ಹಾಕಲಾಗಿದ್ದ ತುಂಡುಗಳು ಕಿತ್ತುಹೋಗಿವೆ. ಈಗ ನಟ್ ಬೋಲ್ಟ್‌ಗಳು ಮಾತ್ರ ರಸ್ತೆಯ ಮೇಲೆ ಹಾಗೆಯೇ ಉಳಿದಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ. ಕಾರು ಸೇರಿದಂತೆ ದ್ವಿಚಕ್ರ ವಾಹನಗಳ ಟೈರ್‌ಗಳು ನಟ್‌ ಬೋಲ್ಟ್‌ ಮೇಲೆ ಹರಿದು ಪಂಚರ್ ಆಗುತ್ತಿವೆ. ಸಾದ್ಯವಾದರೆ ಹೊಸದಾಗಿ ಡಿವೈಡರ್ ಹಾಕಬೇಕು. ಇಲ್ಲವಾದರೆ ರಸ್ತೆಗೆ ಅಳವಡಿಸಿರುವ ನಟ್‌ ಬೋಲ್ಟ್‌ಗಳನ್ನು ತೆಗೆದು ಹಾಕಬೇಕು.

–ರಾಮಚಂದ್ರ ಹೆಗಡೆ, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT