ಉಡುಪಿ: ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮವಾಗಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯವು ಜಿಲ್ಲೆಯಲ್ಲೂ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಬುಧವಾರ ಸಂಜೆಯ ವೇಳೆಗೆ ನಗರದಲ್ಲಿ ಕೆಲವು ಹೋಟೆಲ್ಗಳನ್ನು ಮುಚ್ಚಿದ್ದು, ಗುರುವಾರದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.

ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಗ್ಯಾಸ್ ಏಜೆನ್ಸಿಗಳು ಸ್ಥಗಿತಗೊಳಿಸಿರುವ ಕಾರಣ ಸಣ್ಣ ಹೋಟೆಲ್ ಉದ್ಯಮದಾರರಿಗೆ ಹಾಗೂ ಫಾಸ್ಟ್ ಫುಡ್ ಸೆಂಟೆರ್ನವರಿಗೆ ಹೆಚ್ಚಿನ ಸಮಸ್ಯೆ ಎದುರಾಗಿದೆ.

ರಂಜಾನ್ ತಿಂಗಳ ಉಪವಾಸದ ಕಾರಣವಾಗಿ ಹೋಟೆಲ್ಗಳಲ್ಲಿ ಮೊದಲೇ ಗ್ರಾಹಕರ ಕೊರತೆ ಇದ್ದು, ಇದೀಗ ಅಡುಗೆ ಅನಿಲದ ಸಮಸ್ಯೆಯಿಂದಾಗಿ ಹೋಟೆಲ್ ಉದ್ಯಮಿಗಳು ಬಸವಳಿದಿದ್ದಾರೆ.

ಗೃಹಬಳಕೆಯ ಗ್ರಾಹಕರಿಗೆ ಪೂರೈಕೆಯಲ್ಲಿ ವ್ಯತ್ಯಯವಾಗಬಾರದೆಂಬ ಕಾರಣಕ್ಕೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಗ್ಯಾಸ್ ಏಜೆನ್ಸಿಯವರು ತಿಳಿಸಿದ್ದಾರೆ.

ಗೃಹ ಬಳಕೆಯ ಅಡುಗೆ ಅನಿಲ ಗ್ರಾಹಕರು ಒಂದು ಸಿಲಿಂಡರ್ ಇರುವವರು 21 ದಿನ ಆಗದೆ ಹಾಗೂ ಎರಡು ಸಿಲಿಂಡರ್ ಇರುವವರು 30 ದಿನ ಆಗದೆ ಗ್ಯಾಸ್ ಬುಕ್ ಮಾಡುವಂತಿಲ್ಲ ಎಂದು ಈಗಾಗಲೇ ಗ್ಯಾಸ್ ಏಜೆನ್ಸಿಯವರು ಸೂಚನೆ ನೀಡಿದ್ದಾರೆ.

‘ಹೆಬ್ರಿಯಲ್ಲಿ ಎರಡು ಗೋ ಗ್ಯಾಸ್ ಪಂಪ್ಗಳಿವೆ. ಒಂದು ಪಂಪ್ನಲ್ಲಿ ನಾಲ್ಕೈದು ದಿನಗಳಿಂದ ಗ್ಯಾಸ್ ಲಭ್ಯವಿಲ್ಲ. ಇನ್ನೊಂದು ಪಂಪ್ನಲ್ಲಿ ಗ್ಯಾಸ್ ಲಭ್ಯವಿದೆ ಆದರೆ ದರ ಹೆಚ್ಚಾಗಿದೆ’ ಎಂದು ಗ್ರಾಹಕರೊಬ್ಬರು ತಿಳಿಸಿದರು.

‘ಎಲ್ಪಿಜಿ ಸಿಲಿಂಡರ್ ಪುರೈಕೆಯಲ್ಲಿ ವ್ಯತ್ಯಯವಾಗಿರುವುದು ಬಡವರಿಗೆ, ಮಧ್ಯಮ ವರ್ಗದವರಿಗೆ, ಕ್ಯಾಂಟಿನ್, ಸಣ್ಣ ಹೋಟೆಲ್ ಉದ್ಯಮ ನಡೆಸುವವರಿಗೆ ಹೊಡೆತ ಬಿದ್ದಿದೆ’ ಎಂದು ಉಡುಪಿಯ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.

‘ಏಜೆನ್ಸಿಯವರಲ್ಲಿ ಗ್ಯಾಸ್ ಸಿಲಿಂಡರ್ ಕೇಳಿದರೆ ಕೊಡ್ತೇವೆ, ಕೊಡ್ತೇವೆ ಹೇಳ್ತಾರೆ. ಆದರೆ ಗ್ಯಾಸ್ ಪೂರೈಕೆ ಮಾಡುತ್ತಿಲ್ಲ. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ಕಟ್ಟಿಗೆ ಒಲೆಯಲ್ಲೂ ಅಡುಗೆ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಒಂದು ವಾರ ಇದೇ ಪರಿಸ್ಥಿತಿ ನಿರ್ಮಾಣವಾದರೆ ಕೊರೊನಾ ಕಾಲಕ್ಕಿಂತಲೂ ಪರಿಸ್ಥಿತಿ ಬಿಗಡಾಯಿಸಲಿದೆ’ ಎಂದು ಉಡುಪಿಯ ಅಜ್ಜರಕಾಡಿನ ಫಾಸ್ಟ್ ಫುಡ್ ಅಂಗಡಿಯ ಮಾಲೀಕ ಪ್ರದೀಪ್ ತಿಳಿಸಿದ್ದಾರೆ.

ವಾಣಿಜ್ಯ ಬಳಕೆಯ ಸಿಲಿಂಡರ್ಗಳು ಕಾಳಸಂತೆಯಲ್ಲಿ ಅಧಿಕ ದರಕ್ಕೆ ಮಾರಾಟವಾಗುತ್ತಿವೆ ಎಂಬ ಆರೋಪಗಳೂ ಕೇಳಿ ಬಂದಿವೆ.

ವಾಣಿಜ್ಯ ಬಳಕೆಯ ಎಲ್ಪಿಜಿ ಪೂರೈಕೆಯಾಗದಿದ್ದರೆ ಗುರುವಾರದಿಂದ ಹೆಚ್ಚಿನ ಹೋಟೆಲ್ಗಳನ್ನು ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಬಹುದು
ತಲ್ಲೂರು ಶಿವರಾಮ ಶೆಟ್ಟಿ ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.