ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಳಿಕೆ ಆಹಾರ ತಿಪ್ಪೆಸೇರದ ಬಡವರ ಹೊಟ್ಟೆ ಸೇರಲಿ’

ಮಣಿಪಾಲದ ಟೈಗರ್ ಸರ್ಕಲ್‌ ಆಟೊ ನಿಲ್ದಾಣದಲ್ಲಿ ಸಮುದಾಯ ಶೀತಲೀಕರಣ ಘಟಕಕ್ಕೆ ಚಾಲನೆ
Last Updated 27 ಅಕ್ಟೋಬರ್ 2018, 16:14 IST
ಅಕ್ಷರ ಗಾತ್ರ

ಉಡುಪಿ: ಸಮಾಜದಲ್ಲಿ ಬಹಳಷ್ಟು ಮಂದಿ ಹಸಿದವರಿದ್ದಾರೆ. ಅಂಥವರಿಗೆ ಆಹಾರ ಸಿಗಬೇಕು. ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಸಮುದಾಯ ಶೀತಲೀಕರಣ ಘಟಕ ಸ್ಥಾಪಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಬಿ.ಆರ್.ಹಿರೇಮಠ್ ತಿಳಿಸಿದರು.

ಮಣಿಪಾಲ ಲಯನ್ಸ್ ಕ್ಲಬ್, ಸಿಂಡಿಕೇಟ್ ಬ್ಯಾಂಕ್, ಟ್ಯಾಪ್ಮಿ ಸೋಶಿಯಲ್ ಎಂಡೆವರ್ ಗ್ರೂಪ್, ಫುಡ್ ಝೋನ್‌, ಮಣಿಪಾಲ ರಿಕ್ಷಾ ಚಾಲಕ-ಮಾಲೀಕರ ಸಂಘದ ಸಹಭಾಗಿತ್ವದಲ್ಲಿ ಹಸಿದವರಿಗೆ ಆಹಾರ ಒದಗಿಸಲು ಮಣಿಪಾಲ ಟೈಗರ್ ಸರ್ಕಲ್ ಬಳಿಯ ರಿಕ್ಷಾನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಸಮುದಾಯ ಶೀತಲೀಕರಣ ಘಟಕವನ್ನು ಶನಿವಾರ ಉದ್ಘಾಟಿಸಿ ಮತನಾಡಿದರು.

ಆರ್ಥಿಕವಾಗಿ ಸಬಲರಾದವರು ಅದ್ಧೂರಿ ಸಮಾರಂಭಗಳನ್ನು ಮಾಡುತ್ತಾರೆ. ಸಮಾರಂಭಗಳಲ್ಲಿ ಉಳಿದ ಆಹಾರವನ್ನು ತಿಪ್ಪೆಗೆ ಎಸೆಯುತ್ತಿದ್ದಾರೆ. ಉಳಿಕೆ ಆಹಾರ ಹಸಿದವರಿಗೆ ಸಿಗಬೇಕು ಎಂಬ ಉದ್ದೇಶದಿಂದ‘ಸಂತೃಪ್ತಿ-ಹಸಿವು ಮುಕ್ತ ಸಮಾಜದತ್ತ ಒಂದು ಹೆಜ್ಜೆ’ ಧ್ಯೇಯದಡಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಲಯನ್ಸ್ 317 ಸಿ ಜಿಲ್ಲಾ ಗವರ್ನರ್ ಡಾ.ಟಿ.ಶಿವರಾಮ ಶೆಟ್ಟಿ ಮಾತನಾಡಿ, ‘ಹಸಿವು ನೀಗಿಸುವುದು ದೇವರ ಕೆಲಸಕ್ಕೆ ಸಮಾನ. ಈ ನಿಟ್ಟಿನಲ್ಲಿ ಸಮುದಾಯ ಶೀತಲೀಕರಣ ಘಟಕ ಸ್ಥಾಪಿಸಲಾಗಿದ್ದು, ಇದರಲ್ಲಿ ಸಂಗ್ರಹವಾಗುವ ಆಹಾರವನ್ನು ಹಸಿವಿನಿಂದ ಬಳಲುತ್ತಿರುವವರು ಬಳಸಿಕೊಳ್ಳಬೇಕು ಎಂದರು.‌

ಮಣಿಪಾಲ ಲಯನ್ಸ್ ಕ್ಲಬ್‌ ಮಾಜಿ ಅಧ್ಯಕ್ಷೆ ಸರಿತಾ ಸಂತೋಷ್ ಪ್ರಸ್ತಾವಿಕವಾಗಿ ಮಾತನಾಡಿ, ‘ಶೀತಲೀಕರಣ ಘಟಕವನ್ನು ಸಿಂಡಿಕೇಟ್ ಬ್ಯಾಂಕ್ ನೀಡಿದೆ. ರಿಕ್ಷಾ ನಿಲ್ದಾಣದ ಚಾಲಕರು ಘಟಕದ ನಿರ್ವಹಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಲಯನ್ಸ್ ಕ್ಲಬ್ ನಿರ್ವಹಣಾ ವೆಚ್ಚವನ್ನು ಭರಿಸಲಿದೆ ಎಂದರು.

ನಗರಸಭೆ ಪೌರಾಯುಕ್ತ ಆನಂದ್ ಚಿ.ಕಲ್ಲೋಳಿಕರ್, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸುಬ್ರಾಯ ಕೆ.ಆಚಾರ್ಯ, ಲಯನ್ಸ್ ಕ್ಲಬ್ ಕೋಶಾಧಿಕಾರಿ ರಿತು ಚಾಬ್ರಿಯಾ, ಸ್ವಾಮಿಲ್, ಟ್ಯಾಪ್ಮಿ ಸೋಶಿಯಲ್ ಎಂಡೆವರ್ ಗ್ರೂಪ್‌ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರುತಿ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಮೈತ್ರಿ ಚಂದ್ರಶೇಖರ್ ವಂದಿಸಿದರು. ಸ್ಥಾಪಕ ಸದಸ್ಯ ಡಾ.ಗಣೇಶ್ ಪೈ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT