ಭಾನುವಾರ, ಆಗಸ್ಟ್ 14, 2022
28 °C
ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ವಿವಿಧೆಡೆ ಪ್ರತಿಭಟನೆ

‘ಕೇಂದ್ರ ಸರ್ಕಾರದಿಂದ ಜನರ ಮೇಲೆ ದಬ್ಬಾಳಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ನಗರ ಕಾಂಗ್ರೆಸ್, ಕಿಸಾನ್ ಕಾಂಗ್ರೆಸ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಸ್ಥಳೀಯ ಘಟಕಗಳ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಸರಣಿ ಪ್ರತಿಭಟನೆಯನ್ನು ಕಾರ್ಕಳ ಚತುರ್ಮುಖ ಬಸದಿ ಸಮೀಪದ ಹನುಮಾನ್ ಪೆಟ್ರೋಲ್ ಬಂಕ್‌ನ ಎದುರು ನಡೆಸಲಾಯಿತು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಆಚಾರ್ಯ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸತತ ತೈಲ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಇದು ಖಂಡನೀಯ’ ಎಂದರು.

ಕೆಪಿಸಿಸಿ ಕಿಸಾನ್ ಸಮಿತಿಯ ಕಾರ್ಯದರ್ಶಿ ಉದಯ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ತಾಲ್ಲೂಕು ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ, ಪುರಸಭಾ ಸದಸ್ಯೆ ರೆಹಮತ್, ಪ್ರದೀಪ್ ಶೆಟ್ಟಿ, ಹರೀಶ್ ದೇವಾಡಿಗ, ಸೋಮನಾಥ್ ನಾಯ್ಕ್, ವಿನ್ನಿ ಬೊಲ್ಟ್ ಮೆಂಡೋನ್ಸಾ, ರಾಜೇಶ್ ದೇವಾಡಿಗ, ವಿವೇಕಾನಂದ ಶೆಣೈ, ಬ್ಲಾಕ್ ಕಾಂಗ್ರೆಸ್ ಐ.ಟಿ ಸೆಲ್‌ನ ಅಧ್ಯಕ್ಷ ಸತೀಶ್ ಮೊದಲಾದವರು ಭಾಗವಹಿಸಿದ್ದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

ಶಿರ್ವ: ಮಜೂರು ಗ್ರಾಮೀಣ ಕಾಂಗ್ರೆಸ್ ಘಟಕದ ವತಿಯಿಂದ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಕೊಂಬಗುಡ್ಡೆಯ ಪೆಟ್ರೋಲ್ ಬಂಕ್ ಸಮೀಪ ಪ್ರತಿಭಟನೆ ನಡೆಯಿತು.

ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್ ಮಾತನಾಡಿದರು. ಪ್ರತಿಭಟನನಿರತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕ ಫಾರೂಕ್ ಚಂದ್ರನಗರ, ಮಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗಭೂಷಣ್ ರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಸಾದಿಕ್ ದಿನಾರ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಮ್ರಾನ್ ಮಜೂರು, ಕಾಪು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಲಕ್ಷನ ಪೂಜಾರಿ, ಸಾಬು ಸಾಹೇಬ್ ಮಲ್ಲಾರ್, ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ ಪೂಜಾರಿ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ದಿಲ್ದಾರ್ ಶೇಖ್,
ಝಹೀರ್ ಅಹ್ಮದ್ ಬೆಳಪು, ಸವಿತಾ ಕುಂದರ್ ಪಾದೂರು, ಊರಿನ್ ತಾವ್ರೋ, ಅಬ್ದುಲ್ ಇಲಿಯಾಸ್, ಉನೈಸ್ ಕರಂದಾಡಿ, ಅಬ್ದುಲ್ ರಜಾಕ್ ಇದ್ದರು.

‘ಬೆಲೆ ಏರಿಕೆ: ಜನರ ಬದುಕು ದುಸ್ತರ’

ಕುಂದಾಪುರ: ಕೋವಿಡ್ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿ ಜನರ ಬದುಕನ್ನು ದುಸ್ತರವಾಗಿಸಿವೆ. ಜನ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

 ತೈಲ ಬೆಲೆ ಏರಿಕೆ ಖಂಡಿಸಿ ಇಲ್ಲಿಗೆ ಸಮೀಪದ ಅಂಪಾರು ಸರ್ಕಲ್ ಬಳಿಯಲ್ಲಿನ ಪೆಟ್ರೋಲ್ ಬಂಕ್ ಎದುರು ಸೋಮವಾರ ವಂಡ್ಸೆ ಬ್ಲಾಕ್‌ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಎಂ, ಗುಲ್ವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದೇಶ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಪೂಜಾರಿ, ಕಿರಣ್ ಹೆಗ್ಡೆ ಅಂಪಾರು, ಕಾವ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್ ಪುತ್ರನ್, ಸಂತೋಷ್‌ಕುಮಾರ ಶೆಟ್ಟಿ ಬಲಾಡಿ, ಉದಯಕುಮಾರ ಶೆಟ್ಟಿ, ಹರೀಶ್ ಶೆಟ್ಟಿ ಕೋವಾಡಿ, ಮನೋಹರ್ ಶೆಟ್ಟಿ ಕಂಡ್ಲೂರು, ನೌಷದ್ ಕಂಡ್ಲೂರು, ಶಾಹೀದ್ ಬೆಟ್ಟೆ, ನಕಾಶ್ ಕಂಡ್ಲೂರು, ಪಾಜ್ಜಲ್ ಗುಲ್ವಾಡಿ ಉಮೇಶ್ ಕೊಠಾರಿ, ಸುಕುಮಾರ ಶೆಟ್ಟಿ ಗುಡಿಬೆಟ್ಟು, ಮಂಜುನಾಥ ಶೆಟ್ಟಿ ಭಾಗವಹಿಸಿದ್ದರು.

ಎರ್ಮಾಳಿನಲ್ಲಿ ಪ್ರತಿಭಟನೆ

ಪಡುಬಿದ್ರಿ: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ತೆಂಕ ಎರ್ಮಾಳಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಪ್ರತಿಭಟನೆ ನಡೆಯಿತು. ಗ್ರಾಮೀಣ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್,ಜಿಲ್ಲಾ ಕಿಸಾನ್ ಕಾಂಗ್ರೆಸ್‌ ಅಧ್ಯಕ್ಷ ಶಶಿಧರ ಶೆಟ್ಟಿ ಎಲ್ಲೂರು, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರ, ಅರುಣ ಕುಮಾರಿ, ಮೋಹನ್ ಎಸ್. ಸುವರ್ಣ, ಪ್ರಮುಖರಾದ ವಿನ್ಸೆಂಟ್ ಡಿಸೋಜ, ಸಂತೋಷ್ ಬಂಗೇರ, ಮುಸ್ತಾಕ್ ಅಹಮದ್, ಉದಯ ಪಂಬದ, ರಾಜು ಪೂಜಾರಿ, ಆಸೀಫ್, ಮುಸ್ತಾಕ್, ರಾಜೇಶ್ ಪೂಜಾರಿ, ಹಫೀಜ್, ಶ್ರೀಧರ್ ಪೂಜಾರಿ, ಅಬ್ದುಲ್ ಶುಕುರ್, ಗಿರೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು