ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,000 ಗಡಿ ದಾಟಿದ ಕೋವಿಡ್‌ ಸೋಂಕಿತರು

ಮೂವರು ಸೋಂಕಿತರು ಸಾವು; 492 ಸಕ್ರಿಯ ಪ್ರಕರಣಗಳು
Last Updated 18 ಜುಲೈ 2020, 16:47 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 2,000ದ ಗಡಿ ದಾಟಿದೆ. ಉಡುಪಿ ತಾಲ್ಲೂಕಿನಲ್ಲಿ 58, ಕುಂದಾಪುರದಲ್ಲಿ 40 ಹಾಗೂ ಕಾರ್ಕಳದಲ್ಲಿ 11 ಸೇರಿ ಜಿಲ್ಲೆಯಲ್ಲಿ ಶನಿವಾರ 109 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ 63 ಪುರುಷರು, 39 ಮಹಿಳೆಯರು, 7 ಮಕ್ಕಳು ಇದ್ದಾರೆ. ಬೆಂಗಳೂರು ಪ್ರಯಾಣ ಹಿನ್ನೆಲೆಯ ಇಬ್ಬರು, ಮಂಗಳೂರು, ದಾವಣಗೆರೆ ಪ್ರಯಾಣ ಹಿನ್ನೆಲೆ ಹೊಂದಿರುವ ಇಬ್ಬರು ಹಾಗೂ ದುಬೈನಿಂದ ಉಡುಪಿಗೆ ಬಂದಿದ್ದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಶೀತಜ್ವರದ ಲಕ್ಷಣಗಳಿರುವ 34, ತೀವ್ರ ಉಸಿರಾಟದ ಸಮಸ್ಯೆಯಿದ್ದ ಮೂವರು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 65 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ 524 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 537 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳು ಕಂಡುಬಂದ 50 ಮಂದಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,088ಕ್ಕೇರಿಕೆಯಾಗಿದ್ದು, 492 ಸಕ್ರಿಯ ಪ್ರಕರಣಗಳಿವೆ. ಶನಿವಾರ 43 ಸೇರಿ ಇದುವರೆಗೂ1,586 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮೂವರು ಸೋಂಕಿತರು ಸಾವು

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ಕೋವಿಡ್‌ ಸೋಂಕಿತರು ಶನಿವಾರ ಮೃತಪಟ್ಟಿದ್ದಾರೆ. ಹೃದ್ರೋಗದ ಸಮಸ್ಯೆಯಿದ್ದ ಕಾಪುವಿನ 88 ವರ್ಷದ ವೃದ್ಧರು ಹಾಗೂ ಕಾರ್ಕಳ ತಾಲ್ಲೂಕಿನ 65 ವರ್ಷದ ವ್ಯಕ್ತಿ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 20 ವರ್ಷದ ಯುವತಿಗೆ ಸೋಂಕು ತಗುಲಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT