ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಉಡುಪಿಯಲ್ಲಿ ಇಂದು 6 ಸಾವು, 892 ಮಂದಿಗೆ ಕೋವಿಡ್‌

Last Updated 13 ಮೇ 2021, 16:16 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಗುರುವಾರ 6 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಉಡುಪಿಯ 75, 65 ವರ್ಷದ ವೃದ್ಧರು, 62,51 ಹಾಗೂ 55 ವರ್ಷದ ಮಹಿಳೆಯರು, ಕುಂದಾಪುರ ತಾಲ್ಲೂಕಿನ 38 ವರ್ಷದ ಮಹಿಳೆ ಸೋಂಕಿನಿಂದ ಮೃತರಾದವರು.

ಮೃತ ಸೋಂಕಿತರೆಲ್ಲರೂ ತೀವ್ರ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಂದ ನರಳುತ್ತಿದ್ದು, ಕೋವಿಡ್‌ ಸೋಂಕು ತಗುಲಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 251ಕ್ಕೆ ಏರಿಕೆಯಾಗಿದೆ.

ಗುರುವಾರ 892 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 222, ಕುಂದಾಪುರ ತಾಲ್ಲೂಕಿನ 314, ಕಾರ್ಕಳ ತಾಲ್ಲೂಕಿನ 349 ಮಂದಿ ಸೇರಿದ್ದಾರೆ. 121 ಮಂದಿಗೆ ರೋಗದ ಲಕ್ಷಣಗಳಿದ್ದರೆ, 771 ಮಂದಿಗೆ ಲಕ್ಷಣಗಳಿಲ್ಲ. 17 ಸೋಂಕಿತರು ಆಸ್ಪತ್ರೆಗಳಲ್ಲಿ ಉಳಿದ 875 ಮಂದಿ ಹೋಂಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಸೋಂಕಿತರು–43,628

ಸಕ್ರಿಯ ಪ್ರಕರಣ–7,108

ಗುಣಮುಖ ಆದವರು–36,269

ಒಟ್ಟು ಸಾವು–251

ಹೊಸ ಪ್ರಕರಣ–892

ಗುಣಮುಖ–730

ಸಾವು–6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT