ಭಾನುವಾರ, ಅಕ್ಟೋಬರ್ 20, 2019
22 °C

ಆಭರಣ ಖರೀದಿ ಸೋಗಿನಲ್ಲಿ ವಂಚನೆ

Published:
Updated:

ಉಡುಪಿ: ಜುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಖರೀದಿಸಿ, ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಿರುವುದಾಗಿ ನಂಬಿಸಿ ವಂಚನೆ ಎಸಗುತ್ತಿರುವ ಜಾಲ ಉಡುಪಿಗೆ ಕಾಲಿಟ್ಟಿರುವ ಶಂಕೆ ಇದೆ. ಈ ಬಗ್ಗೆ ಜುವೆಲ್ಲರಿ ಮಾಲೀಕರು ಎಚ್ಚರವಾಗಿರಬೇಕು ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ.

ಈಗಾಗಲೇ ವಂಚಕರ ತಂಡ ಕಾರವಾರ ಹಾಗೂ ಕೊಪ್ಪದಲ್ಲಿ ವಂಚನೆ ಎಸಗಿದೆ. ಉಡುಪಿಯಲ್ಲೂ ಅವರ ಚಲನವಲನದ ಬಗ್ಗೆ ಮಾಹಿತಿ ಸಿಕ್ಕಿದ್ದು, ಎಚ್ಚರವಾಗಿರಬೇಕು ಎಂದು ತಿಳಿಸಿರುವ ಪೊಲೀಸರು, ಆರೋಪಿಗಳ ಭಾವಚಿತ್ರ ಹಾಗೂ ಕಾರಿನ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.‌

ವಂಚಕರ ತಂಡ ಆಭರಣದ ಅಂಗಡಿಗೆ ತೆರಳಿ ಚಿನ್ನ ಖರೀದಿಸುತ್ತದೆ. ಬಳಿಕ ಆನ್‌ಲೈನ್‌ ಪೇಮೆಂಟ್‌ ಮಾಡಿರುವ ಕುರಿತು ಮೊಬೈಲ್‌ನಲ್ಲಿ ದಾಖಲೆ ಸೃಷ್ಟಿಸಿ ಮಾಲೀಕರಿಗೆ ನಂಬಿಸಿ ಚಿನ್ನದೊಂದಿಗೆ ಪರಾರಿಯಾಗುತ್ತದೆ. ಅಸಲಿಗೆ ಮಾಲೀಕರ ಬ್ಯಾಂಕ್ ಖಾತೆಗೆ ಹಣವೇ ಬಂದಿರುವುದಿಲ್ಲ ಎಂದು ಪೊಲೀಸರು ವಂಚನೆಯ ಜಾಲದ ಬಗ್ಗೆ ಮಾಹಿತಿ ನೀಡಿದ್ದಾರೆ.

Post Comments (+)