ಶನಿವಾರ, ಡಿಸೆಂಬರ್ 7, 2019
16 °C
ಪ್ಲೋಝೋನ್‌ ಮೊಬೈಲ್‌ ಅಂಗಡಿ ಕಳವು ಪ್ರಕರಣ

ಅಂತರರಾಜ್ಯ ಕಳ್ಳರ ಬಂಧನ; ಮೊಬೈಲ್‌, ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನ.5ರಂದು ನಗರದ ತ್ರಿವೇಣಿ ಜಂಕ್ಷನ್‌ ಬಳಿಯ ಪ್ಲೇಝೋನ್‌ ಮೊಬೈಲ್ ಅಂಗಡಿಯಲ್ಲಿ ₹ 8.34 ಲಕ್ಷ ಮೌಲ್ಯದ ಮೊಬೈಲ್‌ ಹಾಗೂ ನಗದು ಕಳವು ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯ ರಜಾಕ್‌ ಅಸ್ಲಾಂ ಮುಜಾವರ್‌, ಕುಷ್ಟಗಿ ತಾಲ್ಲೂಕಿನ ರಾಜಾಸಾಬ್ ನಾಯಕ್‌ ಹಾಗೂ ಬಿಹಾರದ ದೀಪಕ್‌ ಪ್ರಸಾದ್‌ ಬಂಧಿತರು.

ಬಂಧಿತರಿಂದ ₹ 3 ಲಕ್ಷ ಮೌಲ್ಯದ 16 ಮೊಬೈಲ್‌, ₹ 22,000, ಕಳವಿಗೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಸಿಪಿಐ ಮಂಜುನಾಥ, ಮಲ್ಪೆ ಠಾಣೆಯ ಪಿಎಸ್‌ಐ ತಿಮ್ಮೇಶ್‌, ಎಎಸ್‌ಐ ರವಿಚಂದ್ರ ಹಾಗೂ ಸಿಬ್ಬಂದಿ ರಾಮು ಹೆಗ್ಡೆ ಡಿಸಿಐಬಿ, ರಾಘವೇಂದ್ರ ಡಿಸಿಐಬಿ, ನಗರ ಠಾಣೆಯ ಲೋಕೇಶ್‌, ಬಾಲಕೃಷ್ಣ, ಇಮ್ರಾನ್‌, ಸಂತೋಷ್‌ ರಾಥೋಡ್‌ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರತಿಕ್ರಿಯಿಸಿ (+)