ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಚಿನ್ನ ಸಾಗಾಟ: 13 ಮಂದಿ ಬಂಧನ

1.383 ಕೆಜಿ ಚಿನ್ನಾಭರಣ ವಶ
Last Updated 27 ಫೆಬ್ರುವರಿ 2020, 15:37 IST
ಅಕ್ಷರ ಗಾತ್ರ

ಉಡುಪಿ: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದಿ ಪೊಲೀಸರು ಕುಂದಾಪುರ ಹಾಗೂ ಬೈಂದೂರಿನಲ್ಲಿ 11 ಮಂದಿಯನ್ನು ಬಂಧಿಸಿ 1 ಕೆಜಿ 383 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

ಬುಧವಾರ ದುಬೈನಿಂದ ಕ್ಯಾಲಿಕಟ್‌ಗೆ ಬಂದಿಳಿದಿದ್ದ ಭಟ್ಕಳ ಮೂಲದ ವ್ಯಕ್ತಿಗಳು, ರೈಲಿನಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಭಟ್ಕಳಕ್ಕೆ ಹೋಗುವಾಗ ಕುಂದಾಪುರದ ವಡೇರ ಹೋಬಳಿ ಪ್ರಭು ಪೆಟ್ರೋಲ್ ಬಂಕ್‌ ಬಳಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ.

ನವೀದ್‌, ಮಹಮ್ಮದ್ ಖಲೀಲ್ ಖಾಜಿಯಾ, ಮಹಮ್ಮದ್ ಆಸಿಂ, ಫೈಜ್ ಅಹಮದ್‌ ಮಾವನ್‌, ಮಹಮ್ಮದ್ ಅದ್ನಾನ್‌, ಮುಜಿತಾಬ್ ಖಾಸಿಂ, ಉಮರ್ ಅಹಮದ್, ವಾಸಿಫ್‌ ಅಹಮದ್‌, ಮುಜಾಮಿಲ್‌, ಜಮೀಲ್‌ ಬಂಧಿತರು.

2 ವಾಹನಗಳಲ್ಲಿದ್ದ 11 ಜನರನ್ನು ಬಂಧಿಸಿ 1 ಕೆ.ಜಿ 152 ಗ್ರಾಂ ಚಿನ್ನದ ಕಾಯಿನ್‌ ಹಾಗೂ 2 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಮಂಗಳೂರು ಕಸ್ಟಮ್ಸ್‌ ವಿಭಾಗಕ್ಕೆ ಒಪ್ಪಿಸಿದ್ದಾರೆ. ಚಿನ್ನದ ಮೌಲ್ಯದ ₹ 46 ಲಕ್ಷ ಎಂದು ಅಂದಾಜಿಸಲಾಗಿದೆ.

ಮತ್ತೊಂದೆಡೆ ಮಂಗಳೂರಿನಿಂದ ಭಟ್ಕಳಕ್ಕೆ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಂದೂರಿನಲ್ಲಿ ಬಂಧಿಸಲಾಗಿದ್ದು, 231 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT