ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದ್ವಿಗುಣ ಆಸೆ ತೋರಿಸಿ ₹ 78,500 ವಂಚನೆ

Last Updated 6 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ಉಡುಪಿ: ಮ್ಯೂಚುವಲ್ ಫಂಡ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ ವಂಚಕರು ವ್ಯಕ್ತಿಯೊಬ್ಬರಿಂದ ₹ 78,500 ಪಡೆದು ಮೋಸ ಮಾಡಿದ್ದಾರೆ.

ಅನುಷ್‌ ರವಿಶಂಕರ್‌ ವಂಚನೆಗೊಳಗಾದವರು. ಈಚೆಗೆ ಕರೆ ಮಾಡಿದವಂಚಕರು ಮ್ಯೂಚುವಲ್ ಫಂಡ್ ಟ್ರೇಡಿಂಗ್ ಬಗ್ಗೆ ತಿಳಿಸಿ, ಹಣ ದ್ವಿಗುಣದ ಆಸೆ ತೋರಿಸಿ ಗೂಗಲ್‌ ಪೇ ಮೂಲಕ ₹ 13,500 ಹಣವನ್ನು ಹಂತ ಹಂತವಾಗಿ ಪಡೆದಿದ್ದಾರೆ.

ಬಳಿಕ ಸೆಕ್ಯೂರಿಟಿ ಡೆಪಾಸಿಟ್, ಫಿಕ್ಸ್ ಡೆಪಾಸಿಟ್, ರಿಫಂಡ್ ಸೆಕ್ಯುರಿಟಿ ಡೆಪಾಸಿಟ್‌ ಹೆಸರಿನಲ್ಲಿ ₹ 65,000 ಹಣ ಪಡೆದಿದ್ದಾರೆ. ಬಳಿಕ ಅನುಷ್‌ಗೆ ವಂಚನೆಗೆ ಸಿಲುಕಿರುವುದು ಅರಿವಿಗೆ ಬಂದಿದೆ. ಉಡುಪಿಯ ಸೆನ್ ಠಾಣೆಯಲ್ಲಿ ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ

ಉಡುಪಿ: ಕುಡಿತದ ಚಟ, ಕೆಲಸ ವಿಲ್ಲದೆ ಮಾನಸಿಕವಾಗಿ ಮನನೊಂದ ಅಶೋಕ್ ನಾಯ್ಕ್ ಎಂಬುವರು ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT