ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೈನುಗಾರರ ಕಲ್ಯಾಣಕ್ಕೆ ಶ್ರಮ: ಕೆ.ಪಿ. ಸುಚರಿತ ಶೆಟ್ಟಿ

ಶಿವಪುರ: ಆಧುನಿಕ ಹೈನುಗಾರಿಕೆ ಮಾಹಿತಿ ಶಿಬಿರದಲ್ಲಿ ಸುಚರಿತ ಶೆಟ್ಟಿ
Published : 9 ನವೆಂಬರ್ 2023, 13:57 IST
Last Updated : 9 ನವೆಂಬರ್ 2023, 13:57 IST
ಫಾಲೋ ಮಾಡಿ
Comments

ಹೆಬ್ರಿ: ‘ಹೈನುಗಾರರ ಕಲ್ಯಾಣಕ್ಕೆ ಹಾಲು ಒಕ್ಕೂಟ ವಿಶೇಷವಾಗಿ ಶ್ರಮಿಸಲಿದೆ. ಪ್ರತಿ ಲೀಟರ್ ಹಾಲಿಗೆ ₹50 ದೊರೆತರೆ ರೈತರ ಶ್ರಮಕ್ಕೆ ಬೆಲೆ ಸಿಗಲಿದೆ. ಒಕ್ಕೂಟಕ್ಕೆ ರೈತರ ಹಿತಾಸಕ್ತಿ ಮುಖ್ಯ’ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.

ಅವರು ಶಿವಪುರ ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಗುರುವಾರ ನಡೆದ ಆಧುನಿಕ ಹೈನುಗಾರಿಕೆ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.

ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡಿ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡುವ ಮೂಲಕ ರೈತರು ಸದೃಢವಾಗಿ ಬೆಳೆದು ಸಂಘ ಮುನ್ನಡೆಸಬೇಕು. ಮಾದರಿಯಾಗಿರುವ ಶಿವಪುರ ಸಂಘ ಇನ್ನಷ್ಟು ಪ್ರಗತಿ ಕಾಣುವಂತಾಗಲಿ ಎಂದು ಶುಭಹಾರೈಸಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್ ಮಾತನಾಡಿ, ಹೈನುಗಾರರು ಧೃತಿಗೆಡುವ ಅಗತ್ಯವಿಲ್ಲ. ಜಾನುವಾರುಗಳನ್ನು ಮಾರಲು ಹೋಗಬೇಡಿ. ಮುಂದೆ ಹೈನುಗಾರಿಕೆಗೆ ಉತ್ತಮ ದಿನಗಳು ಬರಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ ನಾಯಕ್ ಮಾತನಾಡಿದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ, ಶ್ರುತಿ ಖಾರ್ವಿ, ಡಾ.ಧನಂಜಯ ಆಧುನಿಕ ಹೈನುಗಾರಿಕೆ ಮಾಹಿತಿ ನೀಡಿದರು.
ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟ ನಿರ್ದೇಶಕ ನರಸಿಂಹ ಕಾಮತ್ ಸಾಣೂರು, ಸುಧಾಕರ ಶೆಟ್ಟಿ ಮುಡಾರು, ಸ್ಮಿತಾ ಆರ್.ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಶಿವಪುರ ಡೇರಿಯ ನಿರ್ದೇಶಕರು, ಒಕ್ಕೂಟದ ಅಧಿಕಾರಿಗಳು ಇದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದಿರಾ ಸ್ವಾಗತಿಸಿದರು. ಜಗನ್ನಾಥ ಕುಲಾಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT