ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪರೀಕ್ಷಾ ಕೇಂದ್ರಕ್ಕೆ ದೋಣಿಯಲ್ಲಿ ವಿದ್ಯಾರ್ಥಿನಿಯರನ್ನು ಕರೆತಂದ ಡಿಡಿಪಿಐ

Last Updated 22 ಜುಲೈ 2021, 11:23 IST
ಅಕ್ಷರ ಗಾತ್ರ

ಉಡುಪಿ: ಮಳೆಯ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಡಿಡಿಪಿಐ ಎನ್‌.ಎಚ್‌.ನಾಗೂರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಬೈಂದೂರು ತಾಲ್ಲೂಕಿನ ಕುರುದ್ವೀಪಕ್ಕೆ ತೆರಳಿ ಅಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ದೋಣಿಯ ಸಹಾಯದಿಂದ ಪರೀಕ್ಷಾ ಕೇಂದ್ರಕ್ಕೆ ಕರೆತಂದರು.

ಭಾರಿ ಮಳೆಗೆ ಮರವಂತೆ ಸಮೀಪದ ಕುರುದ್ವೀಪ ಜಲಾವೃತಗೊಂಡು ಸಾರಿಗೆ ಸಂಪರ್ಕ ಕಡಿದುಕೊಂಡಿತ್ತು. ನೆರೆಯ ನಡುವೆಯೇ ದ್ವೀಪದಲ್ಲಿದ್ದ ಶಿಲ್ಪಾ ಹಾಗೂ ಸಂಜನಾ ಎಂಬ ವಿದ್ಯಾರ್ಥಿನಿಯರು ಜುಲೈ 19ರಂದು ದೋಣಿಯಲ್ಲಿ ಬಂದು ಪರೀಕ್ಷೆ ಬರೆದಿದ್ದರು. ಈ ವಿಚಾರ ತಿಳಿದ ಡಿಡಿಪಿಐ ಗುರುವಾರ ಬೆಳಿಗ್ಗೆ ಬೈಂದೂರು ತಹಶೀಲ್ದಾರ್ ಹಾಗೂ ಬಿಇಒ ಜತೆ ದ್ವೀಪಕ್ಕೆ ತೆರಳಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ನಂತರ ದೋಣಿಯಲ್ಲಿ ದಡಕ್ಕೆ ಕರೆತಂದು ಅಲ್ಲಿಂದ ಇಲಾಖೆಯ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು.

ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆ ಬರೆದಿದ್ದಾರೆ. ನೆರೆ ಬಂದರೂ ಪರೀಕ್ಷೆ ಬರೆಯಬೇಕು ಎಂಬ ಅವರ ಉತ್ಸಾಹ ಕಂಡು ಸಂತೋಷವಾಯಿತು ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT