ಸೋಮವಾರ, ಡಿಸೆಂಬರ್ 5, 2022
21 °C
ಬಟ್ಟಪ್ಪಾಡಿಯಲ್ಲಿ ಸಿ ವೇವ್ ಬ್ರೇಕರ್: ಸಚಿವ

ವಾರದಲ್ಲಿ ಡೀಸೆಲ್ ಸಹಾಯಧನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಪು (ಪಡುಬಿದ್ರಿ): ಸಮುದ್ರ ಕೊರತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳದ ಕಾಸರಗೋಡಿನ ನೆಲ್ಲಿಕುನ್ನುವಿನಲ್ಲಿ ನಿರ್ಮಿಸಿದ ಸಿ ವೇವ್ ಬ್ರೇಕರ್ ಯೋಜನೆಯ ಮಾದರಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಬಟ್ಟಪ್ಪಾಡಿಯಲ್ಲಿ ಅದನ್ನು ಪ್ರಾಯೋಗಿಕವಾಗಿ ಕಾರ್ಯಗತ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮುದ್ರ ಕೊರೆತಕ್ಕೆ ಕಲ್ಲು ಹಾಕುವುದು ನಿರಂತರ ಕಾರ್ಯಕ್ರಮ. ಎಲ್ಲ ಸರ್ಕಾರಗಳು ಮಾಡುತ್ತ ಬಂದಿವೆ. ಈ ಕಾರ್ಯ ಅಪಹಾಸ್ಯಕ್ಕೊಳಗಾಗಿದ್ದು, ಶಾಶ್ವತ ಯೋಜನೆ ರೂಪಿಸಬೇಕೆಂಬುದು ಮುಖ್ಯಮಂತ್ರಿಗಳ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ತಾಂತ್ರಿಕ ವರದಿಗಳು ಸಿದ್ಧವಾಗಿವೆ. ಅಂದಾಜುಪಟ್ಟಿ ಸಿದ್ಧಪಡಿಸಿ ಶೀಘ್ರ ಟೆಂಡರ್‌ ಆಹ್ವಾನಿಸಲಾಗುವುದು’ ಎಂದರು.

‘ವಿದ್ಯಾಕ್ಷೇತ್ರದಲ್ಲಿ ನಾವು ಸಾಧನೆ ಮಾಡಿದ್ದೇವೆ. ಈ ಹಿಂದೆ ವಿದ್ಯಾರ್ಥಿವೇತನ ನೀಡುವಾಗ ಲೋಪಗಳಾಗಿತ್ತು. |ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಸರಿಪಡಿಸುವ ಪ್ರಯತ್ನ ನಡೆಸಲಾಗಿದೆ. ಜನರಲ್ಲಿ ಭಾವನೆಗಳನ್ನು ರೂಪಿಸುವ ಅಗತ್ಯ ಇದೆ. ಯೋಗ, ಧ್ಯಾನ ವಿಚಾರದಲ್ಲಿ ವಿರೋಧಗಳು ಸಾಮಾನ್ಯವೇ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಜಮಾಡಿ ಮೀನುಗಾರಿಕಾ ಬಂದರು ಕಾಮಗಾರಿ ಆರಂಭವಾಗಿದೆ. 3–4 ಕಡೆ ಸಮುದ್ರ ತಡೆಗೋಡೆ ನಿರ್ಮಾಣದ ಬೇಡಿಕೆಯೂ ಬಂದಿದೆ.
ಮೀನುಗಾರಿಕಾ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ₹ 80 ಕೋಟಿ ಮಂಜೂರಾ
ಗಿದೆ. ತಕ್ಷಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ತಡೆಗೋಡೆ ಕಾಮಗಾರಿಗೂ ₹ 45 ಕೋಟಿ ಅನುದಾನ ಮಂಜೂರಾಗಿದೆ. 21 ಸಾವಿರ ಲೀಟರ್ ಡೀಸೆಲ್ ಸಹಾಯಧನದ ಬೇಡಿಕೆಯಿದ್ದು, 3,000 ಲೀಟರ್‌ಗೆ ಸಹಾಯಧನ ಬಿಡುಗಡೆಯಾಗಿದೆ. ಬಾಕಿ ಬೇಡಿಕೆ ಬಿಡುಗಡೆಗೆ ಕೇಂದ್ರ ಪೆಟ್ರೋಲಿಯಂ ಸಚಿವರೊಂದಿಗೆ ಮುಖ್ಯಮಂತ್ರಿ ಮಾತುಕತೆ ನಡೆಸಿದ್ದು, ಒಂದು ವಾರದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ನಾಡದೋಣಿಗಳ ಸೀಮೆ ಎಣ್ಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪೆಟ್ರೋಲ್ ಎಂಜಿನ್ ಅಳವಡಿಕೆ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿ ಅದಕ್ಕೆ ತಗಲುವ ವೆಚ್ಚ ಸಹಿತ ಸಹಾಯಧನ ಭರಿಸುವ ಬಗ್ಗೆ ಚರ್ಚಿಸಲಾಗಿದೆ. ಮೀನುಗಾರರಿಗೆ ಕಡಿಮೆ ದರದಲ್ಲಿ ಎಂಜಿನ್ ಒದಗಿಸುವ ಚಿಂತನೆ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಳನಾಡ ಮೀನುಗಾರಿಕೆ ಅಭಿವೃದ್ಧಿಗೆ ₹ 103 ಕೋಟಿ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಒಳನಾಡ ಮೀನುಗಾರರ ಸಮಾವೇಶ ಕುರಿತಂತೆ ಸದ್ಯದಲ್ಲಿ ಸಭೆ ನಡೆಸಿ ದಿನಾಂಕ ಗೊತ್ತುಪಡಿಸಲಾಗುವುದು ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.