ಭಾನುವಾರ, ಸೆಪ್ಟೆಂಬರ್ 25, 2022
21 °C

ಬ್ರಹ್ಮಾವರ: ಜಿಲ್ಲಾ ಕಾಂಗ್ರೆಸ್ ಕಾಲ್ನಡಿಗೆ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಕಾಲ್ನಡಿಗೆ ಜಾಥಾ ಬ್ರಹ್ಮಾವರದಲ್ಲಿ ನಡೆಯಿತು.

ತಾಲ್ಲೂಕಿನ ಬಸ್‌ ನಿಲ್ದಾಣದ ಬಳಿ ಕಾಂಗ್ರೆಸ್‌ ಮುಖಂಡ ವಿನಯ ಕುಮಾರ್ ಸೊರಕೆ ಜಾಥಾಕ್ಕೆ ಚಾಲನೆ ನೀಡಿದರು.

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಕಾಂಗ್ರೆಸ್‌ ಪ್ರಮುಖ ಎಂ.ಎ.ಗಫೂರ್‌, ಉಡುಪಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರಮೇಶ್ ಕಾಂಚನ್ , ಕಾಂಗ್ರೆಸ್ ಪ್ರಮುಖರಾದ ಬಿ. ಭುಜಂಗ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಪ್ರಖ್ಯಾತ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಕರ್ಜೆ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಾಜೇಶ್ ಶೆಟ್ಟಿ ಕುಮ್ರಗೋಡು, ಗುರು, ತಾಜುದ್ದೀನ್ ಅಲ್ತಾಫ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ವೆರೋನಿಕಾ ಕರ್ನೆಲಿಯೋ, ಡಾ. ಸುನೀತ ಶೆಟ್ಟಿ, ರೋಶನಿ ಒಲಿವೆರಾ ಇದ್ದರು.

ಸುರಿಯುತ್ತಿದ್ದ ಮಳೆಯಲ್ಲೇ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತ
ರನ್ನು ಒಳಗೊಂಡ ಜಾಥಾವು ಬ್ರಹ್ಮಾವರ ಬಸ್ ನಿಲ್ದಾಣದಿಂದ ರಥಬೀದಿ ಮೂಲಕ ಹಂದಾಡಿ, ಕುಮ್ರಗೋಡು, ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಪ್ಪಿನಕೋಟೆ, ಸಾಲಿಕೇರಿಯಲ್ಲಿ ಸಾಗಿ ಮುಕ್ತಾಯಗೊಂಡಿತು.

ವಂದೇ ಮಾತರಂ, ರಘುಪತಿ ರಾಘವ ರಾಜಾರಾಮ್, ಭಾರತ್ ಮಾತಾಕೀ ಜೈ ಘೋಷಣೆಗಳು ಹಾಗೂ ಅನೇಕ ದೇಶಭಕ್ತಿ ಗೀತೆಗಳು ಜಾಥಾದಲ್ಲಿ ಮೊಳಗಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು