ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಉಲ್‌ ಫಿತ್ರ್‌: ಮನೆಯಲ್ಲಿಯೇ ಪ್ರಾರ್ಥನೆ

Last Updated 24 ಮೇ 2020, 15:37 IST
ಅಕ್ಷರ ಗಾತ್ರ

ಉಡುಪಿ: ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರದ ಕಾರಣ ಮುಸ್ಲಿಮರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಉಲ್ ಫಿತ್ರ್‌ ಆಚರಿಸಿದರು.

ಪ್ರತಿವರ್ಷ 30 ದಿನಗಳ ಉಪವಾಸ ಅಂತ್ಯಗೊಳಿಸುವ ಮೂಲಕ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಧರ್ಮಗುರುಗಳು ಸೂಚನೆ ನೀಡಿದ್ದರಿಂದ ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡಿದರು.

ಪ್ರಾರ್ಥನೆ ಬಳಿಕ ಕುಟುಂಬದ ಸದಸ್ಯರು ಪರಸ್ಪರ ಈದ್‌ ಶುಭಾಶಯ ವಿನಿಮಯ ಮಾಡಿಕೊಂಡರು. ಭಾನುವಾರ ಲಾಕ್‌ಡೌನ್ ಇದ್ದ ಕಾರಣ ಹಬ್ಬಕ್ಕೆ ಬೇಕಾದ ಆಹಾರ ಪದಾರ್ಥಗಳು ಹಾಗೂ ಮಾಂಸವನ್ನು ಶನಿವಾರವೇ ಖರೀದಿಸಿದ್ದರು. ಭಾನುವಾರ ಬೆಳಿಗ್ಗೆ ಸಿಹಿ ಹಾಗೂ ಹಬ್ಬದ ವಿಶೇಷ ಮಾಂಸದ ಖಾದ್ಯಗಳನ್ನು ತಯಾರಿಸಿ ಕುಟುಂಬದೊಂದಿಗೆ ಸವಿದರು. ನೆರೆಹೊರೆಯವರಿಗೆ ಹಬ್ಬದ ಖಾದ್ಯಗಳನ್ನು ಹಂಚಿ ಸಂಭ್ರಮಿಸಿದರು.

ಸಂಪ್ರದಾಯದಂತೆ ಈದ್‌ ದಿನಬಡವರಿಗೆ ನೀಡಲಾಗುತ್ತಿದ್ದ ದಾನವನ್ನು ಶನಿವಾರವೇ ಕೊಡಲಾಯಿತು. ಈ ವರ್ಷ ಸರಳವಾಗಿ ಈದ್‌ ಆಚರಿಸಲಾಯಿತು ಎಂದು ಸಮಾಜದ ಮುಖಂಡರು ತಿಳಿಸಿದರು.

ಬಟ್ಟೆ ಅಂಗಡಿಗಳು ಬಂದ್‌: ಪ್ರತಿವರ್ಷ ಈದ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವುದು ಸಂಪ್ರದಾಯ. ಅದರಂತೆ, ಬಟ್ಟೆ ಅಂಗಡಿಗಳು ಮುಸ್ಲಿಂ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಖರೀದಿ ಭರಾಟೆಯೂ ಜೋರಾಗಿರುತ್ತಿತ್ತು. ಆದರೆ, ಈ ವರ್ಷ ಬಟ್ಟೆ ಅಂಗಡಿಗಳು ಬಂದ್ ಆಗಿದ್ದರಿಂದ ನಗರ ಕಳೆಗುಂದಿದಂತೆ ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT