ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮತ ಚಲಾವಣೆಯಲ್ಲೂ ಮಹಿಳೆಯರೇ ಮುಂದು

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: 3ರಂದು ಫಲಿತಾಂಶ ಪ್ರಕಟ
Last Updated 1 ಸೆಪ್ಟೆಂಬರ್ 2018, 17:38 IST
ಅಕ್ಷರ ಗಾತ್ರ

ಉಡುಪಿ: ನಗರಸಭೆ ಚುನಾವಣಾ ಕಾವು ತಣ್ಣಗಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಸೆ.3ರಂದು ಮತ ಎಣಿಕೆ ನಡೆಯಲಿದ್ದು, ಯಾರಿಗೆ ಸಿಹಿ ಯಾರಿಗೆ ಕಹಿ ತಿಳಿಯಲಿದೆ.

ಶನಿವಾರ ಮುಕ್ತಾಯವಾದ ನಗರಸಭೆ ಚುನಾವಣೆಯಲ್ಲಿ ಒಟ್ಟಾರೆ ಶೇ 62.8ರಷ್ಟು ಮತದಾನ ನಡೆದಿದೆ. ಕುಂದಾಪುರ (73.81), ಕಾರ್ಕಳ ಪುರಸಭೆ (71.61) ಹಾಗೂ ಸಾಲಿಗ್ರಾಮ (75.26) ಪಟ್ಟಣ ಪಂಚಾಯ್ತಿಗೆ ಹೋಲಿಸಿದರೆ ಉಡುಪಿಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ.‌

ಈ ಬಾರಿ ಉಡುಪಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಚುನಾವಣೆಯಲ್ಲಿ 97,561 ಮಂದಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದರು. ಈ ಪೈಕಿ 66,853 ಮತದಾರರು ಮಾತ್ರ ಮತ ಹಾಕಿದ್ದಾರೆ. ಇವರಲ್ಲಿ ಪುರುಷರ ಸಂಖ್ಯೆ 32,659 ಇದ್ದರೆ, ಮಹಿಳೆಯರ ಸಂಖ್ಯೆ 34,194 ಇದೆ.

ಸಾಲಿಗ್ರಾಮ ಪಟ್ಟಣ ಪಂಚಾಯ್ತಿಯ 16 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಶೇ 75.26 ಮತದಾನವಾಗಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾನ ನಡೆದಿರುವುದು ಸಾಲಿಗ್ರಾಮ ಪಟ್ಟಣ ಪಂಚಾಯ್ತಿಯಲ್ಲಿ. 12,961 ಮತದಾರರ ಪೈಕಿ 9755 ಮಂದಿ ಮತ ಚಲಾಯಿಸಿದ್ದಾರೆ.

ಕುಂದಾಪುರ ಪುರಸಭೆಯ 23 ವಾರ್ಡ್‌ಗಳಿಗೆ 23,302 ಮತದಾರರ ಪೈಕಿ 17,200 ಮಂದಿ ಮತ ಹಾಕಿದ್ದಾರೆ. ಕಾರ್ಕಳದ 23 ವಾರ್ಡ್‌ಗಳಿಗೆ 20,604 ಮತದಾರರ ಪೈಕಿ 14,755 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯ ಕಲ್ಮಾಡಿ ವಾರ್ಡ್‌ನಲ್ಲಿ ಅತಿಹೆಚ್ಚು ಅಂದರೆ, ಶೇ 79.23 ಮತದಾನವಾಗಿದೆ. ಇದಕ್ಕೆ ವಿರುದ್ಧವಾಗಿ ಮಣಿಪಾಲ ವಾರ್ಡ್‌ನಲ್ಲಿ ಅತಿ ಕಡಿಮೆ ಶೇ 51.35 ವೋಟಿಂಗ್ ನಡೆದಿದೆ.

ಕಾರ್ಕಳ ಪುರಸಭೆ ವ್ಯಾಪ್ತಿಯ ಕಾಬೆಟ್ಟು ರೋಟರಿ ವಾರ್ಡ್‌ನಲ್ಲಿ ಗರಿಷ್ಠ ಶೇ 80.85 ಹಾಗೂ ಮಧ್ಯಪೇಟೆಯಲ್ಲಿ ಕನಿಷ್ಠ ಶೇ 56.34 ಮತದಾನ ನಡೆದಿದೆ.

ಕುಂದಾಪುರ ಪುರಸಭೆಯ ಖಾರ್ವಿಕೇರಿ ವಾರ್ಡ್‌ನಲ್ಲಿ ಅತಿ ಹೆಚ್ಚು ಶೇ 82.45, ಜೆಎಲ್‌ಬಿ ವಾರ್ಡ್‌ನಲ್ಲಿ ಕನಿಷ್ಠ ಶೇ 66.18 ಮತದಾನ ಆಗಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯ್ತಿಯ ಮೂಡೋಳಿ ಕ್ಷೇತ್ರದಲ್ಲಿ ಗರಿಷ್ಠ ಶೇ 86.59 ಹಾಗೂ ಅತಿ ಕಡಿಮೆ ಭಗವತಿ ವಾರ್ಡ್‌ನಲ್ಲಿ ಶೇ 65.80 ಪ್ರಮಾಣದಲ್ಲಿ ಮತ ಚಲಾವಣೆ ನಡೆದಿದೆ.

ವಿಶೇಷ ಎಂದರೆ ಚುನಾವಣೆ ನಡೆದ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಸಾಲಿಗ್ರಾಮ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿ ಮತ ಚಲಾವಣೆ ಮಾಡಿದ್ದಾರೆ. ಉಡುಪಿ ನಗರಸಭೆಯಲ್ಲಿ 32,659 ಪುರುಷರು ಮತ ಹಾಕಿದ್ದರೆ, 34,194 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯ್ತಿಯಲ್ಲಿ 4,557 ಪುರುಷರು, 5,198 ಮಹಿಳೆಯರು, ಕುಂದಾಪುರ ಪುರಸಭೆಯಲ್ಲಿ 8,331 ಪುರುಷರು, 8,869 ಮಹಿಳೆಯರು ಹಾಗೂಕಾರ್ಕಳ ಪುರಸಭೆಯಲ್ಲಿ 6,967 ಪುರುಷ ಮತದಾರರು ಮತ ಹಾಕಿದ್ದರೆ, 7,788 ಮಹಿಳೆಯರು ಮತ ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT