ಮಹಿಳಾ ಮೀನು ಮಾರಾಟಗಾರರು ಆರ್ಥಿಕವಾಗಿ ಸದೃಢರಾಗಿ: ಎಚ್.ಬೇಬಿ ಸಾಲ್ಯಾನ್

7

ಮಹಿಳಾ ಮೀನು ಮಾರಾಟಗಾರರು ಆರ್ಥಿಕವಾಗಿ ಸದೃಢರಾಗಿ: ಎಚ್.ಬೇಬಿ ಸಾಲ್ಯಾನ್

Published:
Updated:
Deccan Herald

ಉಡುಪಿ: ಮೀನು ವ್ಯಾಪಾರ ಮಾಡುವುದನ್ನೇ ಕುಲ ಕಸುಬನ್ನಾಗಿ ಮಾಡುತ್ತಿರುವ ಮೀನುಗಾರ ಮಹಿಳೆಯರು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಉಡುಪಿ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಎಚ್.ಬೇಬಿ ಸಾಲ್ಯಾನ್ ತಿಳಿಸಿದರು.

ಉಡುಪಿ ಕಿನ್ನಿಮೂಲ್ಕಿಯ ವೀರಭದ್ರ ದೇವಸ್ಥಾನದ ಸಭಾಭವನ ಸಭಾಂಗಣದಲ್ಲಿ ಶನಿವಾರ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 8ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರಿಂದ ಸ್ಥಾಪನೆಯಾದ ಆರ್ಥಿಕ ಸಂಸ್ಥೆಯಲ್ಲಿ ಮೀನುಗಾರ ಮಹಿಳೆಯರು ಹೆಚ್ಚೆಚ್ಚು ವ್ಯವಹಾರ ನಡೆಸಿದರೆ ಸಂಘಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಲಾಭವನ್ನು ಸಂಘದ ಸದಸ್ಯರು ವಿನಿಯೋಗಿಸಿಕೊಳ್ಳಬಹುದು ಎಂದು ಹೇಳಿದರು.

ಹಸಿಮೀನು ಮಾರಾಟಗಾರ ಮಹಿಳೆಯರ ನೇತೃತ್ವದಲ್ಲಿ ತಾಲ್ಲೂಕಿನ 30 ಮೀನು ಮಾರುಕಟ್ಟೆಗಳ ಸಹಕಾರದೊಂದಿಗೆ ಮೀನು ಮಾರಾಟಗಾರರ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ಈ ಮೂಲಕ ಯಾವುದೇ ರೀತಿಯ ಮೀನಿನ ಅಂಗಡಿಗಳು ನಗರದಲ್ಲಿ ತಲೆಎತ್ತುವುದಕ್ಕೆ ಸಂಘ ಬಿಡುವುದಿಲ್ಲ. ಮೀನುವ್ಯಾಪಾರ ಮಾಡುವ ಮಹಿಳೆಯರು ಸಂಘದ ಸದಸ್ಯರಾಗಿ ಸಂಘಟನೆಯ ಬಲವನ್ನು ಹೆಚ್ಚಿಸಬೇಕು ಎಂದರು.

ಉಡುಪಿ ಮಹಾಲಕ್ಷ್ಮಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿಯ ನಿರ್ದೇಶಕ ಯಶ್‌ಪಾಲ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಕಾರಿ ಸದಸ್ಯರ 54 ಮಕ್ಕಳಿಗೆ ₹ 75,000 ವಿದ್ಯಾರ್ಥಿ ವೇತನ, ದೊಡ್ಡಣಗುಡ್ಡೆ ಮೀನುಮಾರುಕಟ್ಟೆಯ ಬೇಬಿ ಮೆಂಡನ್‌ ಅವರಿಗೆ ₹ 10,000 ಆರೋಗ್ಯ ನೆರವು, ಮಡಿಕೇರಿ ಮತ್ತು ಕೇರಳ ಜಲಾವೃತ ಸಂತ್ರಸ್ತರಿಗೆ ₹ 5000 ದೇಣಿಗೆಯನ್ನು ವಿತರಿಸಲಾಯಿತು. ಪಿಎಚ್‌.ಡಿ ಪದವಿ ಪಡೆದ ಬಬಿತ ಶಶಿಕಲ ಸುವರ್ಣ ಉಚ್ಚಿಲ, ಕರಾಟೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಮಾಣಿಕ್ ಸುವರ್ಣ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಜಯಂತಿ ಗುರುದಾಸ್ ಬಂಗೇರ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಫೇಡರೇಶನ್ ನಿರ್ದೇಶಕ ಮಂಜುನಾಥ್ ಎಸ್.ಕೆ, ನಿರ್ದೇಶಕರಾದ ಸುರೇಶ್ ಬಿ.ಕುಂದರ್, ನಾರಾಯಣ ಪಿ ಕುಂದರ್, ಹರೀಶ್ ಜಿ. ಕರ್ಕೇರ, ಲಕ್ಷ್ಮೀ ಆನಂದ್, ಸರೋಜ ಕಾಂಚನ್, ಸುನೀತ ಜೆ.ಬಂಗೇರ,ಇಂದಿರಾ ವಿ.ಕಾಂಚನ್,ಭಾನುಮತಿ ಕಾಂಚನ್, ಜಯಂತಿ ಎನ್. ಕೋಟ್ಯಾನ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿ, ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !