ಶನಿವಾರ, ನವೆಂಬರ್ 23, 2019
17 °C

ಬಿಸ್ಕೆಟ್‌ ಲಾರಿಯಲ್ಲಿ ಬೆಂಕಿ: ನಷ್ಟ

Published:
Updated:
Prajavani

ಕುಂದಾಪುರ: ತಾಲ್ಲೂಕಿನ ದೂಪದಕಟ್ಟೆ ಬಳಿ ಗುರುವಾರ ಬಿಸ್ಕೆಟ್‌ ಹಾಗೂ ರಸ್ಕ್‌ ತುಂಬಿಕೊಂಡು ಸಾಗುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಸರಕು ನಷ್ಟವಾಗಿದೆ.

ವಾಹನದೊಳಗೆ ಸಂಭವಿಸಿದ ಶಾರ್ಟ್‌ ಸರ್ಕ್ಯೂಟ್‌ನಿಂದ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಹಾಗೂ ಸಿಬ್ಬಂದಿ ವಾಹನವನ್ನು ನಿಲ್ಲಸಿ ಇಳಿದಿದ್ದಾರೆ. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಲಾರಿ ಕುಂದಾಪುರದಿಂದ ಸಿದ್ದಾಪುರ ಮಾರ್ಗವಾಗಿ ತೆರಳುತ್ತಿತ್ತು.

ಪ್ರತಿಕ್ರಿಯಿಸಿ (+)