ಉಡುಪಿ ಸಮೀಪ ಎರಡು ಮೀನುಗಾರಿಕೆ ದೋಣಿಗಳು ಕಡಲು ಪಾಲು

7
16 ಮೀನುಗಾರರ ರಕ್ಷಣೆ

ಉಡುಪಿ ಸಮೀಪ ಎರಡು ಮೀನುಗಾರಿಕೆ ದೋಣಿಗಳು ಕಡಲು ಪಾಲು

Published:
Updated:

ಉಡುಪಿ: ಮಲ್ಪೆ ಕಡಲತೀರದಿಂದ ಶನಿವಾರ ಮೀನುಗಾರಿಕೆಗೆ ತೆರಳಿದ್ದ ಎರಡು ಮೀನುಗಾರಿಕಾ ದೋಣಿಗಳು ಗಂಗೊಳ್ಳಿ ಬಳಿ ಸಮುದ್ರದೊಳಗೆ ಮುಳುಗಿವೆ.

ಅದೃಷ್ಟವಶಾತ್ ಯಾವುದೇ ಸಾವುನೋವುಗಳಾಗಿಲ್ಲ. ಮೀನುಗಾರಿಕೆಗೆ ಜತೆಯಲ್ಲೇ  ತೆರಳಿದ್ದ ಇತರ ದೋಣಿಗಳ ಮೀನುಗಾರರು ಎಲ್ಲರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ಮುಳುಗಡೆಯಾದ ದೋಣಿಗಳಲ್ಲಿ 16 ಮೀನುಗಾರರಿದ್ದರು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಯಾಂತ್ರೀಕೃತ ಮೀನುಗಾರಿಕೆ ಮೇಲಿದ್ದ ನಿಷೇಧ ಆಗಸ್ಟ್ 1ರಿಂದ ತೆರವಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಮೀನುಗಾರರು ಸಮುದ್ರಕ್ಕಿಳಿದಿದ್ದರು.

ಭಾರಿ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡು ಈ ಅವಘಡ ನಡೆದಿದೆ. ಮುಳುಗಡೆಯಾದ ಒಂದು ದೋಣಿಯ ಹೆಸರು ಶಿವ-ಗಣೇಶ್ ಎಂದು ತಿಳಿದುಬಂದಿದೆ. ಮತ್ತೊಂದು ದೋಣಿಯ ವಿವರ ತಿಳಿದಿಲ್ಲ ಎಂದು ಅವರು ಮಾಹಿತಿ ನೀಡಿದರು.

‘ಸದ್ಯ ಒಂದು ಬೋಟ್ ಮುಳುಗಡೆಯಾಗಿರುವ ಮಾಹಿತಿ ಸಿಕ್ಕಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ. ಘಟನೆ ಬಗ್ಗೆ ಯಾರೂ ದೂರು ನೀಡಿಲ್ಲ’ ಎಂದು ಮಲ್ಪೆ ಠಾಣೆಯ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !