ಅಳಿವಿನಂಚಿನ ಕಾಡುಪ್ರಾಣಿ ಬೇಟೆ: ಇಬ್ಬರ ಬಂಧನ

7

ಅಳಿವಿನಂಚಿನ ಕಾಡುಪ್ರಾಣಿ ಬೇಟೆ: ಇಬ್ಬರ ಬಂಧನ

Published:
Updated:
Deccan Herald

ಹೆಬ್ರಿ: ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಾಲೆ ಹೊನ್ನಕೊಪ್ಪಲದಲ್ಲಿ ಕಾಡು ಪ್ರಾಣಿ ಬರ್ಕವನ್ನು ಬೇಟೆ ಮಾಡಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಹೆಬ್ರಿ ಮತ್ತು ಕಾರ್ಕಳ ವಲಯ ಅರಣ್ಯಾಧಿಕಾರಿಗಳ ತಂಡ ಬುಧವಾರ ಬಂಧಿಸಿದೆ.

ಬಂಟ್ವಾಳ ತಾಲ್ಲೂಕು ಈರಾ ಗ್ರಾಮದ ಮೋನುದ್ದೀನ್ ಕುಂಜ್ಞ, ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಹೌಸ್ ಶಾಹುಲ್ ಹಮೀದ್ ಬಂಧಿತರು. ಬಂಟ್ವಾಳ ಅಬ್ದುಲ್ ಹಮೀದ್ ಯಾನೆ ಹಮೀದ್ ತಲವಾರ್ ಮತ್ತು ಕಬ್ಬಿನಾಲೆ ಜಡ್ಡು ಮನೆಯ ಸುಧಾಕರ ಮೇರ ಪರಾರಿಯಾಗಿದ್ದಾರೆ.

ಆರೋಪಿಗಳಿಂದ ಬೇಟೆಯಾಡಿದ ಪ್ರಾಣಿ, ಕೋವಿ, ಟಾರ್ಚ್ ಲೈಟ್, ಚೂರಿಗಳು, ಮಾರುತಿ ಕಾರು ವಶಪಡಿಸಿಕೊಳ್ಳಲಾಗಿದೆ.

ಹೆಬ್ರಿ ವಲಯದ ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್, ರಾಘವೇಂದ್ರ ಶೆಟ್ಟಿ, ಅರಣ್ಯ ರಕ್ಷಕರಾದ ದೇವಾನಂದ, ಪ್ರಭಾತ್, ಗಣಪತಿ, ಆನಂದ, ಬಾಬು, ದಿಲೀಪ್ ಭಾಗವಹಿಸಿದ್ದರು. ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮತ್ತು ಮೂಡುಬಿದಿರೆ ಉಪ ವಿಭಾಗದ ಎಸಿಎಫ್ ಎಂ.ಎಂ.ಅಚ್ಚಪ್ಪ ಮಾರ್ಗದರ್ಶನದಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !