ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಮೂರ್ತಿ ವಿಸರ್ಜನೆ

46 ದಿನಗಳ ಉತ್ಸವಕ್ಕೆ ತೆರೆ
Last Updated 16 ಅಕ್ಟೋಬರ್ 2021, 3:01 IST
ಅಕ್ಷರ ಗಾತ್ರ

ಪಡುಬಿದ್ರಿ: ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವಿಜಯದಶಮಿ ದಿನವಾದ ಶುಕ್ರವಾರ ವೈಭವಯುತವಾಗಿ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

ಐತಿಹಾಸಿಕ ಹಿನ್ನಲೆಯುಳ್ಳ ಪಡುಬಿದ್ರಿ ಬಾಲಗಣೇಶ ದೇವಸ್ಥಾನ
ದಲ್ಲಿ ಗಣೇಶ ಚತುರ್ಥಿಯ ದಿನವಾದ ಸೆಪ್ಟಂಬರ್ 10ರಂದು ಪ್ರತಿಷ್ಠಾಪನೆಗೊಂಡ ಗಣಪತಿಯನ್ನು ನವರಾತ್ರಿಯವರೆಗೆ 46 ದಿನ ಪೂಜಿಸಲಾಗುತ್ತದೆ.

ಭಕ್ತರು ಇಷ್ಟಾರ್ಥ ಈಡೇರಿಕೆಗಾಗಿ ಹರಕೆಯ ರೂಪದಲ್ಲಿ ರಂಗಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದೆ.

ಕಳೆದ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ ಪೂಜೆ ನಡೆದಿತ್ತು. ಈ ಬಾರಿಯೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ರಂಗಪೂಜೆ ಕಾರ್ಯಗಳು ನಡೆದವು. ಸಂಜೆ ಮಹಾಪೂಜೆ ಬಳಿಕ ಗಣೇಶ ಮೂರ್ತಿಯನ್ನು ಸಮುದ್ರದಲ್ಲಿ ಜಲಸ್ತಂಭನ ಮಾಡಲಾಯಿತು.

ಶೋಭಾಯಾತ್ರೆಯಲ್ಲಿ ಕೊಂಬು, ವಾದ್ಯ, ಭಜನೆ ಸಹಿತ ವಿವಿಧ ವೇಷಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT