ಶುಕ್ರವಾರ, ಜೂನ್ 18, 2021
22 °C
ಗಣೇಶ ಹಬ್ಬಕ್ಕೆ ಖರೀದಿ ಚುರುಕು; ಮೂರ್ತಿ ತಯಾರಿಕೆಯಲ್ಲಿ ಮಗ್ನರಾದ ಕಲಾವಿದರು

ಕೊಂಚ ಕೊರೊನಾ ಛಾಯೆ ಸರಿಸಿದ ಚೌತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹಬ್ಬಗಳ ಮೇಲೆ ಕವಿದಿದ್ದ ಕೋವಿಡ್ ಛಾಯೆ ಕೊಂಚ ಸರಿದಂತೆ ಕಾಣುತ್ತಿದೆ. ಸಾರ್ವಜನಿಕ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಅನುಮತಿ ನೀಡಿದ್ದ ಬೆನ್ನಲ್ಲೇ ನಗರದಲ್ಲಿ ಚೌತಿ ಹಬ್ಬದ ಸಂಭ್ರಮ ನಿಧಾನವಾಗಿ ಕಳೆಗಟ್ಟುತ್ತಿದೆ.

ಗಣೇಶ ಮೂರ್ತಿ ತಯಾರಿಸಬೇಕೆ ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ಕಲಾವಿದರು ಹಬ್ಬಕ್ಕೆ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆ ಮೂರ್ತಿ ಸಿದ್ಧಪಡಿಸುವ ಕೆಲಸ ಚುರುಕುಗೊಳಿಸಿದ್ದಾರೆ. ನಗರದ ಅಲ್ಲಲ್ಲಿ ಗಣಪತಿ ಮೂರ್ತಿಗಳಿಗೆ ಅಂತಿಮ ರೂಪಕೊಡುತ್ತಿದ್ದ ದೃಶ್ಯ ಕಂಡುಬಂತು.

ಕೊರೊನಾ ಕಾರಣದಿಂದ ಕಳೆದ ವರ್ಷದಷ್ಟು ಮೂರ್ತಿಗಳು ಈ ಬಾರಿ ತಯಾರಾಗಿಲ್ಲ. ಗಾತ್ರದಲ್ಲೂ ಇಳಿಕೆಯಾಗಿದ್ದು, ಚಿಕ್ಕ ಮೂರ್ತಿಗಳ ತಯಾರಿಕೆಗೆ ಕಲಾವಿದರು ಒಲವು ತೋರುತ್ತಿದ್ದಾರೆ. ಪಿಒಪಿ ಬದಲಾಗಿ ಮಣ್ಣಿನ ವಿಗ್ರಹಗಳ ತಯಾರಿಕೆ ಹೆಚ್ಚಾಗಿ ಕಂಡುಬಂತು.

ಹಬ್ಬದ ಖರೀದಿಯೂ ಚೇತರಿಕೆ ಕಾಣುತ್ತಿದೆ. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬಂದಿದ್ದು, ರಥಬೀದಿ, ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂ, ಹಣ್ಣು ಹಾಗೂ ಕಬ್ಬನ್ನು ಮಾರಾಟ ಮಾಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು